Cycle Savaari : ಸೈಕಲ್ ಸವಾರಿ ನವೆಂಬರ್ 3ರಂದು ತೆರೆಗೆ

ಉತ್ತರ ಕರ್ನಾಟಕದ ಪರಿಸರದಲ್ಲಿ ನಡೆಯುವ ಸೈಕಲ್ ಪ್ರೇಮಿಗಳ ಪಯಣದ ಕಥೆಯನ್ನು ಹೊಂದಿದ ಸೈಕಲ್ ಸವಾರಿ ಚಿತ್ರ ನವೆಂಬರ್ 3ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಮುಗ್ಧ ಹೃದಯಗಳ ಲವ್ ಸ್ಟೋರಿಯನ್ನು ಆಧರಿಸಿ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯುವ ಪ್ರತಿಭೆ ದೇವು ಕೆ ಅಂಬಿಗ ಅವರು ಚಿತ್ರಕಥೆ, ಕಥೆ, ನಿರ್ದೇಶನದ ಜೊತೆಗೆ ನಾಯಕನ ಪಾತ್ರವನ್ನು ಮಾಡಿದ್ದಾರೆ. ಸೈಕಲ್ ಮೇಲೆ ಮಿಠಾಯಿ ಮಾರುತ ಜೀವನ ನಡೆಸುವ ಯುವಕನ ಮೇಲೆ ಜೀವವನ್ನು ಇಟ್ಟುಕೊಂಡ ಶ್ರೀಮಂತ ಹುಡುಗಿಯ ಕಥೆಯನ್ನು ದೇವು ಕೆ ಅಂಬಿಗ ಅವರು ಬೆಳಿತರೆಯ ಮೇಲೆ ತರುವ ಯತ್ನವನ್ನು ಮಾಡಿದ್ದಾರೆ.

ಈ ಚಿತ್ರದ ಸೌಕಾರ್ ಮನಿ ಗೂಳಿಯೆಲ್ಲ ಎನ್ನುವ ಜವಾರಿ ಹಾಡು ಬಿಡುಗಡೆಯಾಗಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸುವಲ್ಲಿ ಯಶಸ್ವಿಯಾಗಿದೆ. ಈ ಹಾಡಿಗೆ ನಿರ್ದೇಶಕರೇ ಸಾಹಿತ್ಯವನ್ನು ರಚಿಸಿದ್ದು, ವಸುಶ್ರೀ ಹಳೆಮನೆ ಅವರು ಹಾಡಿದ್ದಾರೆ. ರೋಹನ್ ಎಸ್ ದೇಸಾಯಿ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಅವರು ಕ್ಯಾಮೆರಾ ಕೆಲಸ ಕೂಡ ಮಾಡಿದ್ದಾರೆ.

ಈ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಮುದ್ದು ಬಂಗಾರ ಹಾಡು ಹಿಟ್ ಎನಿಸಿಕೊಂಡಿದೆ. ಇದರ ಜೊತೆಗೆ ನಾಯಕ ತನ್ನ ಹುಡುಗಿಯನ್ನು ನೆನೆದು ದುಃಖದಿಂದ ಹೇಳುವ ಮರೆತು ಹೋಗಲು ಹೇಳು ಕಾರಣ ಹಾಡು ನೋಡುಗರ ಕಣ್ಣಲ್ಲಿ ನೀರು ತರಿಸಿದೆ.

ಸೈಕಲ್ ಸವಾರಿ ಚಿತ್ರವನ್ನು ಕಲಾರಂಗ್ ಫಿಲಂ ಸ್ಟುಡಿಯೋ ವತಿಯಿಂದ ಸುರೇಶ್ ಶಿವುರ ಹಾಗೂ ಲೋಕೇಶ್ ಸವದಿ ಅವರು ನಿರ್ಮಿಸಿದ್ದಾರೆ. ನಾಯಕಿಯಾಗಿ ಬಿಜಾಪುರ ಮೂಲದ ದೀಕ್ಷಾ ಬೀಸೆ ಅವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಶಿವಾಜಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಗೀತಾ ರಾಘವೇಂದ್ರ, ಇನ್ನೊಬ್ಬ ನಾಯಕಿಯಾಗಿ ಕಾವ್ಯ ನಟಿಸಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!