ಜೈದ್ ಖಾನ್ ಮತ್ತು ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕಲ್ಟ್’ ಜನವರಿ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರಕ್ಕೆ ಅನಿಲ್ ಕುಮಾರ್ ಟಿ.ಎಂ. ನಿರ್ದೇಶನ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಮಲೈಕಾ ವಸುಪಾಲ್ ಹಾಗೂ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
“ಇದು ಕೇವಲ ಪ್ರೇಮಕಥೆಯಲ್ಲ. ಇಂದಿನ ಯುವಕರಿಗೆ ಒಳ್ಳೆಯ ಸಂದೇಶ ನೀಡುವ ಚಿತ್ರ. ಜನವರಿ 23ರಂದು ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ನಮ್ಮ ಚಿತ್ರಕ್ಕೆ ಪ್ರೀತಿ ಮತ್ತು ಬೆಂಬಲ ನೀಡಿ” ಎಂದು ನಾಯಕ ನಟ ಜೈದ್ ಖಾನ್ ಮನವಿ ಮಾಡಿದ್ದಾರೆ.
ಸಸ್ಪೆನ್ಸ್, ಡ್ರಾಮಾ ಹಾಗೂ ರೊಮ್ಯಾನ್ಸ್ ಮಿಶ್ರಣ ಹೊಂದಿರುವ ‘ಕಲ್ಟ್’ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದ ಕಾರ್ಯಕ್ರಮದ ವೇಳೆ ಝೈದ್ ಖಾನ್ ನ್ನು ನೋಡಲು ಬಂದ ಶಫೀಹುಲ್ಲಾ ಎಂಬ ಯುವಕ ಜಾರಿ ಬಿದ್ದು ಗಾಯಗೊಂಡು ಕಾಲು ಮುರಿದುಕೊಂಡಿದ್ದಾನೆ.
ಝೈದ್ ಖಾನ್ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಯತ್ತ ಸಾಗುತ್ತಿದ್ದರು. ರಸ್ತೆಯ ಎರಡೂ ಬದಿಯಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ನಟನನ್ನು ಹತ್ತಿರದಿಂದ ನೋಡಲು ಮುಂದಕ್ಕೆ ಬಂದ ಶಫೀಹುಲ್ಲಾ ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದಾನೆ. ಕಾರ್ಯಕರ್ತರು ಶಫೀಹುಲ್ಲಾರನ್ನು ಆಂಬುಲೆನ್ಸ್ ಮೂಲಕ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಯಕ್ರಮವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
—–





Be the first to comment