‘ಕ್ರಿಸ್ ಮಸ್’ ಗೆ ಮರ್ಡರ್ ಚಿತ್ರ ಬಿಡುಗಡೆ.

ರಾಮ್ ಗೋಪಾಲ್ ವರ್ಮ ಗೆ ನವರಸನ್ ಸಾಥ್

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮ ನೇತೃತ್ವದ, ನಟ್ಟಿ ಕ್ರಾಂತಿ , ನಟ್ಟಿ ಕರುಣ ನಿರ್ಮಾಣದ  ಮರ್ಡರ್ ಚಿತ್ರ ಡಿಸೆಂಬರ್ 24 ರಂದು ನಾಲ್ಕು ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

ನವರಸನ್ ಅವರು ಮರ್ಡರ್ ಚಿತ್ರವನ್ನು ಕನ್ನಡದಲ್ಲಿ ತಮ್ಮ ಶ್ರೀ ಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್* ಮೂಲಕ ಬಿಡುಗಡೆ ಮಾಡುತ್ತಿದ್ದಾರೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ. ನೈಜಘಟನೆ‌ ಆಧಾರಿತ ಈ ಚಿತ್ರವನ್ನು ಆನಂದ್ ಚಂದ್ರ ನಿರ್ದೇಶಿಸುತ್ತಿದ್ದಾರೆ.

ಕ್ರೈಂ ಮಿಸ್ಟರಿ ಆಧಾರಿತ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಡಿ.ಎಸ್.ಆರ್ ಸಂಗೀತ ನಿರ್ದೇಶನ,‌ ಜಗದೀಶ್ ಚೀಕಟಿ ಛಾಯಾಗ್ರಹಣ ಹಾಗೂ ಶ್ರೀ ಕಾಂತ್ ಪಟ್ನಾಯಕ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀಕಾಂತ್ ಐಯ್ಯಂಗಾರ್, ಸಾಹಿತಿ, ಗಾಯತ್ರಿ ಭಾರ್ಗವಿ ಮುಂತಾದವರಿದ್ದಾರೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!