`ದಂಡು ಪಾಳ್ಯ’ ಅನ್ನೋ ಟೈಟಲ್ ಇಟ್ಟುಕೊಂಡು ಪ್ರೋಡ್ಯೂಸರ್ ವೆಂಕಟ್ & ಡೈರೆಕ್ಟರ್ ಶ್ರೀನಿವಾಸರಾಜು ಸಾಕಷ್ಟು ಸದ್ದು ಮಾಡಿ, ಒಂದರ ಹಿಂದೆ ಒಂದಾಗಿ ಮೂರು ಭಾಗವನ್ನು ಮಾಡಿ ಮುಗಿಸಿದ್ದು ನಿಮ್ಗೇ ಗೊತ್ತೇ ಇದೆ. ಈ `ಪಾಳ್ಯ’ ಸೀರಿಸ್ ಮೂಲಕ ಖಾಲಿ ಕೂತಿದ್ದ ಮಳೆ ಹುಡುಗಿಗೆ ಒಂದಷ್ಟು ಆಫರ್‍ಗಳು ಒದಗಿಬಂದದ್ದು ಸುಳ್ಳಲ್ಲ. ಈಗ ದಂಡುಪಾಳ್ಯಂ 4 ಚಿತ್ರ ತೆರೆಗೆ ಸಿದ್ಧವಾಗಿದೆ. ಆದರೆ ಇಲ್ಲಿ ಡೈರೆಕ್ಟರ್ ಶ್ರೀನಿವಾಸರಾಜು ಅವರಿಗೆ ವೆಂಕಟ್ ಕೋಕ್ ಕೊಟ್ಟು ನಿರ್ದೇಶನ ಜವಾಬ್ದಾರಿಯನ್ನು ಕೆ.ಟಿ. ನಾಯಕ್ ಅವರ ಹೆಗಲೇರಿಸಿಲಾಗಿದೆ. ಶ್ರೀನಿವಾಸರಾಜು ತೋರಿಸದೇ ಇರೋ ಹಿಂಸೆಯನ್ನು ಉಳಿದಿದ್ದನ್ನು ನಾಯಕ್ ತೋರಿಸಲಿದ್ದಾರೆ. ಇನ್ನು, ಮಳೆಹುಡುಗಿ ಪೂಜಾಗಾಂಧಿಯ ಸ್ಥಾನಕೆ ಸುಮನ್‍ರಂಗನಾಥ್ ರಿಪ್ಲೇಸ್ ಆಗಿದ್ದಾರೆ.
ಹಿಂಸೆಯನ್ನೇ ನೆಚ್ಚಿಕೊಂಡು ಒಂದಷ್ಟು ದುಡ್ಡು ಮಾಡಿಕೊಂಡಿರುವ ವೆಂಕಟ್‍ಗೆ ನೆತ್ತಿರಿನ ಆಸೆ ಯಾವಾಗ ಕೊನೆಯಾಗುತ್ತದೋ ಗೊತ್ತಿಲ್ಲ. `ನಾವು ನಮ್ಮ ಚಿತ್ರದ ಮೂಲಕ ನಾಗರಿಕರನ್ನು ಅಲರ್ಟ್ ಮಾಡ್ತೀವಿ’ ಅನ್ನೋ ವೆಂಕಟ್‍ಗೆ ಯುವಜನರ ದಾರಿ ತಪ್ಪಿಸುತ್ತಿದ್ದೇವೆ ಅನ್ನೋ ಅರಿವಿಲ್ಲ ಯಾಕೆ? ದುಡ್ಡಿಗಾಗಿ `ಎ’ ಸರ್ಟಿಪೀಕೆಟ್ ಚಿತ್ರಗಳ ಮೂಲಕ ಸಮಾಜದ ಸ್ವಾಸ್ತ್ಯ ಕೆಡಿಸಲು ಹೊರಟಿರುವ ವೆಂಕಟ್‍ಟೀಂ, `ಪಾಳ್ಯ-4’ ಒಂದಷ್ಟು ದುಡ್ಡು ಬಾಚಿಕೊಂಡರೆ ಸದ್ಯದಲ್ಲೇ `ಪಾಳ್ಯ-5’ ತೆರೆಕಾಣದಲಿದೆ. `ಹಿಂಸೆ ಮುಂದವರಿಯಲಿದೆ’ ಅನ್ನುವ ಟ್ಯಾಗ್‍ಲೈನ್ ಹಾಕಿಕೊಂಡಿರುವ ವೆಂಕ್ಟನ ನೆತ್ತರ ಹಸಿವು ಜಾಗೃತವಾಗಿರುತ್ತೋ ಅಲ್ಲಿವರೆಗೆ ಹಿಂಸೆಯ ಸರಣಿಗಳು ಮುಂದುವರಿಯಲಿವೆ.
ಅಂದಹಾಗೆ `ಪಾಳ್ಯ-4’ ಸಾಂಗ್ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ನ್ಯೂಸ್ ಬಂದಿದೆ ಓದಿ ನೋಡಿ.
ಟಗರು ಚಿತ್ರದ ಟೈಟಲ್ ಸಾಂಗಿಗೆ ಧ್ವನಿಯಾಗೋ ಮೂಲಕವೇ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದವರು ತಮಿಳು ಜನಪದ ಗಾಯಕ ಆಂತೋಣಿ ದಾಸನ್. ಈ ಗಾಯಕ ಈಗ ದಂಡುಪಾಳ್ಯಂ ಗ್ಯಾಂಗಿನ ಜೊತೆ ಸೇರಿಕೊಂಡಿದ್ದಾರೆ. ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಿರೋ ಹಾಡೊಂದಕ್ಕೆ ಆಂಥೋಣಿ ದಾಸನ್ ಧ್ವನಿಯಾಗಿದ್ದಾರೆ. ಅನಂದ್‍ರಾಜ್ ಮತ್ತು ಅಂತೋಣಿವರಿಗೆ ಹೀಗಾಗಬಾರದಿತ್ತು ಪಾಪ! ಈ ಹಾಡು ಟಗರು ಟೈಟಲ್ ಸಾಂಗಿನಂತೆಯೇ ಸದ್ದು ಮಾಡಲಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ. ಅಂದರೆ ಟಗರಿನಂತೆ ಚಿತ್ರದಲಿ ಮನುಷ್ಯ ಮುಷ್ಯನನ್ನು ಗುಮ್ಮುವಂತಹ ಹಿಂಸೆ ಇದೆ ಅಂತರ್ಥ!
ಇನ್ನುಳಿದಂತೆ ಈ ಚಿತ್ರದಲ್ಲಿ ಎರಡು ಹಾಡುಗಳಿರಲಿವೆ. ಅದರಲ್ಲೊಂದನ್ನು ಆಂತೋಣಿ ದಾಸನ್ ಹಾಡಿದ್ದರೆ ಮತ್ತೊಂದಕ್ಕೆ ರ್ಯಾಪರ್ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ. ರ್ಯಾಪರ್ ಚಂದನ್ ಬಿಗ್‍ಬಾಸ್‍ನಲಿ ತಾನು ಅನುಭಿಸಿದ ಹಿಂಸೆಯನ್ನು ಮೆಲುಕು ಹಾಕಿಕೊಂಡು ಹಾಡಿದ್ದರಿಂದ, ಸಾಮಗ್ ಸೂಪರ್ ಆಗಿದೆಯಂತೆ. ಈ ಎರಡೂ ಹಾಡುಗಳಿಗೆ ನಿರ್ಮಾಪಕರಾದ ವೆಂಕಟ್ ಅವರೇ ಸಾಹಿತ್ಯ ಒದಗಿಸಿರೊದ್ರಿಂದ ಹಾಡುಗಳಲ್ಲೂ ಸಾಕಷ್ಟು ಕ್ರೌರ್ಯವನ್ನು ನಿರೀಕ್ಷಿಸಬಹುದು. ಈ ಎರಡು ಹಾಡುಗಳಲ್ಲಿ ಮೊದಲು ಆಂತೋಣಿ ದಾಸನ್ ಹಾಡಿರುವ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಲಿರಿಕಲ್ ವೀಡಿಯೋವನ್ನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಕ್ರೈಮ್ ಸಿನಿಮಾಗಳೆಂದರೆ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ದಂಡುಪಾಳ್ಯಂ-4 ಸಿನಿಮಾದಲ್ಲಿ ಹಾಡುಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕಾರಣ ಒಂದು ಹಾಡಿನಲ್ಲಿ `ಐಟಮ್’ ಬಾಂಬ್ ಮೂಮೈತ್ ಖಾನ್ ಹುಚ್ಚೆದ್ದು ಕುಣಿದಿರುವುದು. ರಜನಿಕಾಂತ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್ ಗಳ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿರುವ ತಮಿಳಿನ ಬಾಬಾ ಭಾಸ್ಕರ್‍ಗೆ ಪಾಪ ವೆಂಕಟ್ ಚಿತ್ರದ ಎರಡೂ ಹಾಡಿಗೆ ಕೊರಿಯೋಗ್ರಫಿ ಮಾಡುವ ಅದ್ಭುತ(!) ಅವಕಾಶ ಬಂದೊದಗಿದೆ.
ನಿರ್ದೇಶನ ಕೆ.ಟಿ. ನಾಯಕ್, ಕ್ಯಾಮರಾ ಆರ್. ಗಿರಿ, ಸಂಕಲನ ಬಾಬು ಎ ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನ ಈ ಚಿತ್ರಕ್ಕಿದೆ. ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ಪ್ರತಿಭಾವಂತ ನಟನಟಿಯರಿಂದ ವರೈಟಿ ವರೈಟಿ ಹಿಂಸೆಯನ್ನು ಮಾಡಿಸಿರುವ ವೆಂಕೆಂಟ್ ಸ್ಯಾಂಡಲ್‍ವುಡ್ ಮಟ್ಟಿಗೆ `ಕ್ರೈಮ್‍ಸ್ಟಾರ್’. ಜೊತೆಗೆ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೊದ್ರಿಂದ, ಭಾಗ-4 ಇನ್ನಷ್ಟು ರಂಜನೀಯವಾಗಲಿದೆ.
Pingback: mini sex doll