ಕ್ರಿಕೆಟಿಗ ಶ್ರೀಶಾಂತ್ ನಟನೆಯ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಅಭಿನಂದನೆ ವ್ಯಕ್ತವಾಗಿದೆ.
‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಶ್ರೀಶಾಂತ್ ಬಣ್ಣ ಹಚ್ಚಿದ್ದಾರೆ.ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಶಿವನ್ ಚಿತ್ರಕ್ಕೆ ಆಯಕ್ಷನ್-ಕಟ್ ಹೇಳುತ್ತಿದ್ದಾರೆ.
‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಸಮಂತಾ, ನಯನತಾರಾ, ವಿಜಯ್ ಸೇತುಪತಿ ಪ್ರಮುಖ ಪಾತ್ರಗಳನ್ನುಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶ್ರೀಶಾಂತ್ ಬಣ್ಣ ಹಚ್ಚಿದ್ದು ಅವರು ಹುಟ್ಟುಹಬ್ಬವಾದ ಫೆ.7ರಂದು ‘ಕಾದು ವಾಕುಲ ರೆಂಡು ಕಾದಲ್’ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಪೋಸ್ಟರ್ನಲ್ಲಿ ಶ್ರೀಶಾಂತ್ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಲಾಗಿದೆ. ಮೊಹಮ್ಮದ್ ಮೊಬಿ ಹೆಸರಿನ ಪಾತ್ರದಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರೆ.
‘ಕ್ರಿಕೆಟ್ ಮೈದಾನದಲ್ಲಿ ನಿಜವಾದ ಚಾಂಪಿಯನ್ ಆಗಿದ್ದ ಶ್ರೀಶಾಂತ್ ಬೆಳ್ಳಿಪರದೆಯಲ್ಲಿ ಆಳ್ವಿಕೆ ಮಾಡಲಿದ್ದಾರೆ. ಶ್ರೀಶಾಂತ್ ಅವರನ್ನು ಮೊಹಮ್ಮದ್ ಮೊಬಿ ಆಗಿ ಪರಿಚಯಿಸುತ್ತಿದ್ದೇವೆ’ ಎಂದು ಚಿತ್ರತಂಡ ತಿಳಿಸಿದೆ.
ಶ್ರೀಶಾಂತ್ ಅವರು ಹಲವು ಜಾಹೀರಾತುಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. ಈಗ ಅವರು ಯಾವ ರೀತಿ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
____






Be the first to comment