ರಾಘವ್ ಸೂರ್ಯ ಚೊಚ್ಚಲ ನಿರ್ದೇಶನದ ” ಕಂಟ್ರಿ ಮೇಡ್ “ಗ್ಯಾಂಗ್ ಸ್ಟರ್ ಸಿನಿಮಾದ ಮುಹೂರ್ತಕ್ಕೆ ಇಂದು ಚಾಲನೆ ನೀಡಲಾಯಿತು.
ಮುಹೂರ್ತ ಸಮಾರಂಭ ದಲ್ಲಿ ಮಾತನಾಡಿದ ನಿರ್ದೇಶಕ, ರಾಘವ್ ಸೂರ್ಯ, ನಾನು ಕನ್ನಡದಲ್ಲಿ ಬರಹಗಾರ ಆಗಿ ಕೆಲಸ ಮಾಡಿದವನು. ಈ ಹಿಂದೆ ಸಹಾಯಕ ನಿರ್ದೇಶಕರು ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಈ ಸಿನಿಮಾ ಮಾಸ್ ಆಗಿದೆ. ಚಿತ್ರದ ಕಥೆ ಕೊಲ್ಕತ್ತಾ ಹಾಗೂ ಉತ್ತರ ಕರ್ನಾಟಕದಲ್ಲಿ ನಡೆಯುತ್ತದೆ. ಗನ್ ಹುಡುಕಿಕೊಂಡು ಹೋಗುವ ಜರ್ನಿ ಇಲ್ಲಿದೆ ಎಂದರು.
“ಚಿತ್ರವನ್ನು 60ರಿಂದ 70 ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಲಾಗುವುದು. ಚಿತ್ರದ ಮೂಲಕ ವ್ಯಕ್ತಿ ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನುವ ಸಂದೇಶವನ್ನು ನೀಡುವ ಯತ್ನ ಮಾಡಲಾಗುತ್ತಿದೆ. ಹೀರೋಯಿನ್ ಹೆಸರು ಸ್ವೀಟಿ ಎಂದಾಗಿದೆ. ಚಿತ್ರಕ್ಕೆ ನಕುಲ ಭಯಂಕರ ಸಂಗೀತ ನೀಡುತ್ತಿದ್ದು ಚಿತ್ರದಲ್ಲಿ 4- 5 ಹಾಡುಗಳಿವೆ. ತಬಲ ನಾಣಿ, ನಾಗಶೇಖರ್ ನಟಿಸುತ್ತಿದ್ದಾರೆ” ಎಂದರು.
ಈ ಚಿತ್ರ ಶೂಟಿಂಗ್ ಮುನ್ನ ತೆಲುಗು ಚಿತ್ರ ಗುರುತುಂಡ ಸೀತಾಕಾಲಂ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಗುರುತುಂಡ ಸೀತಾಕಾಲಂ ಚಿತ್ರದ ಸಹ-ನಿರ್ಮಾಪಕ ರವಿ ಈ ಪ್ರಾಜೆಕ್ಟ್ ನ ನಿರ್ಮಾಣ ಮಾಡಲಿದ್ದಾರೆ. ರಾಘವ್ ಸೂರ್ಯ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ ಆಗಿದ್ದಾರೆ.
ನಾಯಕ ನಿಶ್ಚಿತ್ ಮಾತನಾಡಿ, ” ಸಿನಿಮಾದಲ್ಲಿ ಗನ್ ಇದ್ದರೆ ಹೇಗೆ ಕಂಟ್ರೋಲ್ ಮಾಡಬಹುದು ಎನ್ನುವ ಅಂಶ ಇದೆ. ಇದರಲ್ಲಿ ಎರಡು ಶೇಡ್ ಇದ್ದು ಈ ಎರಡರಲ್ಲೂ ನಾನೇ ನಟಿಸುತ್ತಿದ್ದೇನೆ. ಟಾಮ್ ಅಂಡ್ ಜೆರ್ರಿ ಮೊದಲೇ ಈ ಚಿತ್ರದ ಅಗ್ರಿಮೆಂಟ್ ನಡೆದಿತ್ತು” ಎಂದರು.
ಟಾಮ್ ಅಂಡ್ ಜೆರ್ರಿ ಖ್ಯಾತಿಯ ನಿಶ್ಚಿತ್ ಕೊರೊಡಿ ಮತ್ತು ಲವ್ ಮಾಕ್ಟೇಲ್ ನಾಯಕಿ ರೇಚೆಲ್ ಡೇವಿಡ್ ಈ ಸಿನಿಮಾಗಾಗಿ ಜೊತೆಯಾಗಿದ್ದಾರೆ. ಗಂಟುಮೂಟೆ ಮತ್ತು ಟಾಮ್ ಅಂಡ್ ಜೆರ್ರಿಯಲ್ಲಿನ ಪಾತ್ರಕ್ಕಾಗಿ ನಿಶ್ಚಿತ್ ಮೆಚ್ಚುಗೆ ಪಡೆದಿದ್ದಾರೆ. ಮಲಯಾಳಂ ನಟಿ ರೇಚೆಲ್ ಡೇವಿಡ್ ಲವ್ ಮಾಕ್ಟೇಲ್ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ.
ದುನಿಯಾ ವಿಜಯ್, ವಸಿಷ್ಟ ಸಿಂಹ ಮೂಹೂರ್ತಕ್ಕೆ
ಅತಿಥಿಗಳಾಗಿ ಆಗಮಿಸಿದ್ದರು.
Be the first to comment