ಕಾಟನ್ ಪೇಟೆ ಗೇಟ್ ಶೂಟಿಂಗ್ ಬಹುತೇಕ ಪೂರ್ಣ

ಆರ್ ಶ್ರೀನಿವಾಸ್ ನಿರ್ಮಿಸುತ್ತಿರುವ ಇಪ್ಪತ್ತನೆಯ ಚಿತ್ರ “ಕಾಟನ್ ಪೇಟೆ ಗೇಟ್” ನ ಶೂಟಿಂಗ್ ಬಹುತೇಕ ಪೂರ್ಣ ಆಗಿದೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಈ ಚಿತ್ರ ಮೂಡಿ ಬರುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು, ಹೈದರಾಬಾದ್ ನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ವೈ ರಾಜಕುಮಾರ್ ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲಿ “ಕಾಟನ್ ಪೇಟೆ ಗೇಟ್”, ತೆಲುಗಿನಲ್ಲಿ “ಸೀತಣ್ಣಪೇಟಾ ಗೇಟ್” ಹೆಸರಿನಲ್ಲಿ ನಿರ್ಮಾಣವಾಗುತ್ತಿದೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎನ್ ಎಸ್ ಪ್ರಸು ಸಂಗೀತ ನೀಡುತ್ತಿದ್ದಾರೆ. ಚಿಡತಾಲ ನವೀನ್, ಯೋಗಿ ರೆಡ್ಡಿ ಛಾಯಾಗ್ರಹಣ, ಶಿವ ಸರ್ವಣಿ ಸಂಕಲನ, ಬಯ್ಯವರಪು ರವಿ ಸಂಭಾಷಣೆ ಬರೆದಿದ್ದಾರೆ.

ವೇಣುಗೋಪಾಲ್, ಯಶ್ವನ್, ಸುರಭಿ ತಿವಾರಿ, ಅನುಶಾ ಜೈನ್, ಸುಧಿಕ್ಷ, ಕಿಸ್ಲೆ ಚೌಧರಿ , ಪಾರ್ಥು ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!