ಕೊರೋನ ಚ್ಯಾರಿಟಿಗಾಗಿ 400KM ಓಡುತ್ತಿರುವ ಸುಮನ್ ನಗರ್ ಕರ್

ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ.

ಈ ನಿಟ್ಟಿನಲ್ಲಿ ನಮ್ಮ ಸ್ಯಾಂಡಲ್ ವುಡ್ ತಾರೆಯರೂ ಸಹ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್ ಕೂಡ ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ.

ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ fund raise(ಹಣ ಸಂಗ್ರಹಣೆ) ಮಾಡಿ, ಹಾಗೆ ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನ ಸರಬರಾಜು ಮಾಡಲಿದ್ದಾರೆ.

ಈ ಒಂದು ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡಲಿಚ್ಚಿಸುವವರು Facebookನ Move2feed ಅಥವಾ ಸುಮನ್ ನಗರ್ ಕರ್ ಅವರ Facebook ಪೇಜ್ ಅಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಕೆಲ ವರ್ಷಗಳ ಬ್ರೇಕ್ ನಂತರ ನಟನೆಗೆ ಮರಳಿರುವ ಸುಮನ್, ತಮ್ಮದೇ ನಿರ್ಮಾಣ ಸಂಸ್ಥೆಯಿಂದ “ಬಬ್ರೂ” ಹಾಗೂ “ಬ್ರಾಹ್ಮಿ” ಚಿತ್ರಗಳ ನಿರ್ಮಾಣ ಸಹ ಮಾಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರಬರ್ತಿಯವರ “ಲಾಕ್ಡೌನ್ ಡೈರೀಸ್” ಹಿಂದಿ ಕಿರುಚಿತ್ರ ಹಾಗೂ ಸಿಂಗಾಪುರ್ ನಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪ ಕ್ರಿಷ್ನನ್ ಶುಕ್ಲಾ ಅವರ ಇಂಗ್ಲಿಷ್ ಹಿಂದಿ ಮಿಶ್ರಿತ ಚಲನಚಿತ್ರ “ಡಾಟ್ಸ್” ನಲ್ಲಿ ಕೂಡ ಅಭಿನಯಿಸಿದ್ದಾರೆ.

ಆದರೆ ಎಷ್ಟೋ ಜನರಿಗೆ ಸುಮನ್ ಬಗ್ಗೆ ಗೊತ್ತಿರದ ವಿಷಯವೆಂದರೆ ಆಕೆ ಮ್ಯಾರಥಾನ್(42.2km) ರನ್ನ ರ್ ಎಂಬುದು. ಅಮೇರಿಕಾ ಹಾಗೂ ಬೆಂಗಳೂರಿನ ಹಲವಾರು ಮ್ಯಾರಥಾನ್ ರೇಸ್ಗಳಲ್ಲಿ ಇವರು ಭಾಗವಹಿಸಿದ್ದಾರೆ.

ಈಗ ಈ ಇಪ್ಪತ್ತು ದಿನಗಳ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡುವ ಈ ಅಭಿಯಾನದ ಮೂಲಕ fund raise ಮಾಡಿ ಕಷ್ಟದಲ್ಲಿರುವವರಿಗೆ ನೆರವಾಗುವ ಆಸೆ ಇವರದ್ದು.

This Article Has 1 Comment
  1. Pingback: find more information

Leave a Reply

Your email address will not be published. Required fields are marked *

Translate »
error: Content is protected !!