ಕೊರೋನಾ ವೈರಸ್ ಸೋಂಕಿತರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯ, ಪೊಲೀಸ್, ನರ್ಸ್, ಹಾಲು
ವಿತರಕರು, ಪೌರ ಕಾರ್ಮಿಕರು ಮತ್ತು ಪತ್ರಕರ್ತರಿಗೆ ಓಗರ ಫುಡ್ಸ್ ಕೃತಜ್ಞತೆ ಸಲ್ಲಿಸಿದೆ.
ಕೊರೋನಾ ವಾರಿಯರ್ಸ ಗಾಗಿ ಆಹಾರ ಉತ್ಪನ್ನಗಳನ್ನು ನೀಡುವ ಮೂಲಕ ಬೆಂಬಲ ಸೂಚಿಸಿದೆ.
ಕೊರೋನಾ ಸೋಂಕಿತರಿಗಾಗಿ ಹಲವು ದಿನಗಳಿಂದ ಮನೆಯಿಂದ ದೂರವಿದ್ದು, ಸೇವೆ ಸಲ್ಲಿಸುತ್ತಿರುವ
ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರ ಮನೆಗೆ ಆಹಾರ ತಲುಪಿಸುವ
ಕಾರ್ಯವನ್ನು ಓಗರ ಹಮ್ಮಿಕೊಂಡಿದೆ.ಇವರ ಕಾರ್ಯ್ಯಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರ ಸಹಕಾರ ಮತ್ತು ಮಾರ್ಗದರ್ಶನ ಇದೆ.ಈಗಾಗಲೇ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮತ್ತು ಪತ್ರಕರ್ತರ ಮನೆಗಳನ್ನು ಗುರುತಿಸಲಾಗಿದ್ದು,ರೆಡಿಮೆಡ್ ಫುಡ್ ಆಗಿರುವ ಪ್ಯಾಕೆಟ್‍ಗಳನ್ನು ಆಯಾ ಸಿಬ್ಬಂದಿಗಳ ಮನೆಗೆ ಉಚಿತವಾಗಿ ತಲುಪಿಸುವ ಯೋಜನೆಯನ್ನು ಓಗರ ಫುಡ್ಸ್ ಸಂಸ್ಥೆ ಮಾಡಿದೆ.
ಸಾಂಪ್ರದಾಯಿಕ ಆಹಾರಗಳಿಗೆ ಹೆಸರಾಗಿರುವ ಓಗರ, ಪುಳಿಯೊಗರೆಯಿಂದ ರವಾ ಇಡ್ಲಿವರೆಗೂ ರೆಡಿಮೆಡ್ ಪ್ಯಾಕೆಟ್‍ಗಳನ್ನು ಹೊಂದಿದ್ದು, ಕೇವಲ ಬಿಸಿ ನೀರಿನಲ್ಲಿ ಹಾಕಿ ಆಹಾರ ತಯಾರಿಸಬಹುದಾಗಿದೆ.ಬೇಗ ಆಹಾರ ಮಾಡುವಂತಹ ಎಲ್ಲ ಮಿಶ್ರಣಗಳನ್ನು ಅದು ಹೊಂದಿದೆ. ಹಾಗಾಗಿ ಕಡಿಮೆ ಸಮಯದಲ್ಲೇ ಹಸಿವು ನೀಗಿಸುವಂಥ ಕಾರ್ಯ ಇದಾಗಿದೆ.
ಈ ಕುರಿತು ಓಗರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಾಥ್ ಹೇಳುವುದು ಹೀಗೆ, “ಜಗತ್ತು ಹಿಂದೆಂದೂ ಕಾಣದಂತಹ ಪರಿಸ್ಥಿತಿ ತಲೆದೋರಿದೆ. ಮಾನವ ಕುಲಕ್ಕೆ ಅಪಾಯ ಬಂದಿದೆ. ಇಂತಹ ಸಂದರ್ಭದಲ್ಲಿ ನಾವು ದೇಶದೊಂದಿಗೆ ನಿಂತುಕೊಳ್ಳಬೇಕಿದೆ. ಹಸಿದ ಮತ್ತು ಜನರಿಗಾಗಿ ಕೆಲಸ ಮಾಡುತ್ತಿರುವವರಿಗೆ ಕೃತಜ್ಞತೆ ಹೇಳಬೇಕಿದೆ. ಲಾಭ ನಷ್ಟದ ಆಲೋಚನೆಯನ್ನು ಬದಿಗಿಟ್ಟು ಎಲ್ಲರೂ ನಾವು ಕೆಲಸ ಮಾಡಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ ಅವರ ಆಶಯದಂತೆ ನಾವೆಲ್ಲರೂ ದೇಶಕ್ಕಾಗಿ ಮತ್ತು ಮತ್ತೊಬ್ಬರ ಸಹಾಯಕ್ಕಾಗಿ ಬದ್ಧರಾಗಬೇಕಿದೆ. ಹಾಗಾಗಿ ನನ್ನ ಸಂಸ್ಥೆ ಓಗರದಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇದು ನನ್ನ ದೇಶಕ್ಕಾಗಿ ಸಲ್ಲಿಸುತ್ತಿರುವ ಸಣ್ಣ ಸೇವೆ’ ಎಂದರು.
ಕೊರೋನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ಲಾಕ್‍ಡೌನ್ ಪರಿಪಾಲನೆ
ಮಾಡುತ್ತಿದ್ದಾರೆ. ವೈದ್ಯ, ಪೊಲೀಸ್ ಮತ್ತು ಪತ್ರಕರ್ತರು ಸಂಕಷ್ಟದಲ್ಲಿ ಇರುವವರಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ರಘುನಾಥ್.
ಓಗರ ಸಂಸ್ಥೆಯ ಈ ಕೆಲಸಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ ನಾರಾಯಣ್ ಸರ್ ಅವರು ಕೂಡ ಸಹಕಾರ ಮತ್ತು ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ. ಇವರ ಸಹಕಾರ ಮತ್ತು ಮಾರ್ಗದರ್ಶನಕ್ಕೆ ರಘುನಾಥ್ ಅವರು ಧನ್ಯವಾದಗಳು ತಿಳಿಸಿದ್ದಾರೆ.
Pingback: CI CD
Pingback: Casino