ಪ್ರತಾಪ್ ಗಂಧರ್ವ ನಿರ್ದೇಶನದ ಕಂಗ್ರಾಚುಲೇಷನ್ಸ್ ಬ್ರದರ್ ಚಿತ್ರ ಯಶಸ್ಸು ಕಂಡಿದ್ದು ಇದರ ಹಿಂದೆ ವಿತರಕ ಮುನೀಂದ್ರ ಅವರ ಪಾತ್ರ ಇದೆ.
ಪ್ರಶಾಂತ್ ಕಲ್ಲೂರು ಅವರು ನಿರ್ಮಿಸಿರುವ ಕಂಗ್ರಾಚುಲೇಷನ್ಸ್ ಬ್ರದರ್ ಚಿತ್ರ ಎರಡು ವಾರದ ಹಿಂದೆ ಬಿಡುಗಡೆಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಈಗಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಚಿತ್ರದಲ್ಲಿ ಯುವ ನಟ ರಕ್ಷಿತ್ ನಾಗ್, ಸಂಜನ್ ದಾಸ್ ಹಾಗೂ ಅನುಷಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರ ಯಶಸ್ಸು ಕಂಡಿರುವ ಬಗ್ಗೆ ಮಾತನಾಡಿರುವ ವಿತರಕ ಮುನೀಂದ್ರ ಅವರು, ಸಿನಿಮಾ ಓಡಲು ಒಳ್ಳೆಯ ಕಂಟೆಂಟ್ ಇರುವುದು ಬಹಳ ಮುಖ್ಯವಾಗುತ್ತದೆ. ನಿರ್ಮಾಪಕರು ಸಿನಿಮಾ ಮಾಡಲು ವರ್ಷಗಟ್ಟಲೆ ಕಾಯುತ್ತಾರೆ. ಆದರೆ ರಿಲೀಸ್ ಗೆ ಒಂದು ತಿಂಗಳು ಕೂಡ ಕಾಯುವುದಿಲ್ಲ. ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ದೊಡ್ಡ ಸಿನಿಮಾ ಇದ್ದಾಗ ಅದರ ಹಿಂದೆ ಹಾಗೂ ಮುಂದೆ ಚಿತ್ರ ಬಿಡುಗಡೆ ಮಾಡಿ ಶ್ರಮವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಒಂದು ಸಿನಿಮಾ ಗೆದ್ದರೆ ಮಾತ್ರ ಇನ್ನಷ್ಟು ಸಿನಿಮಾಗಳು ಗೆಲ್ಲಲು ಸ್ಪೂರ್ತಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಎಂಪಿ ಫಿಲಂಸ್ ಮೂಲಕ ಕೆ ಮುನೀಂದ್ರ ಅವರು ಚಿತ್ರವನ್ನು ವಿತರಣೆ ಮಾಡಿದ್ದಾರೆ. ಈ ಚಿತ್ರವನ್ನು ಎಲ್ಲಾ ಭಾಗದ ವೀಕ್ಷಕರು ನೋಡುವಂತೆ ತಲುಪಿಸಲು ಕ್ರಮ ವಹಿಸಿದ್ದು ಚಿತ್ರ ಯಶಸ್ಸು ಕಾಣಲು ಕಾರಣವಾಗಿದೆ.
ಚಿತ್ರ ನೋಡಿದವರು ತಮ್ಮ ಸ್ನೇಹಿತರಿಗೂ ಹೇಳುತ್ತಿದ್ದಾರೆ. ಮೊದಲ ಚಿತ್ರ ಹಿಟ್ ಆದ ಖುಷಿಯಿದೆ. ಯಾವುದೇ ನಿರ್ಮಾಪಕರಿಗೆ ತೊಂದರೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.
ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿರುವ ನಿರ್ಮಾಪಕ ಪ್ರಶಾಂತ್ ಕಲ್ಲೂರು ಅವರು, ನಾಲ್ಕನೇಯ ವಾರದಲ್ಲಿ ಜನರು ಚಿತ್ರವನ್ನು ನೋಡುತ್ತಿದ್ದಾರೆ. ಇತ್ತೀಚೆಗೆ ಕುಟುಂಬದ ಜೊತೆಗೆ ಸಿನಿಮಾ ನೋಡಿದೆ. ಸಿನಿಮಾ ನೋಡಿದ ಅಪ್ಪ ಬೆನ್ನು ತಟ್ಟಿದರು. ಇದು ನನಗೆ ಸಿಕ್ಕ ನಿಜವಾದ ಗೆಲುವು ಆಗಿದೆ. ಇನ್ನು ಮುಂದೆ ಎರಡು ವರ್ಷಗಳಿಗೆ ಮೂರು ಸಿನಿಮಾ ಮಾಡುವ ಯೋಜನೆ ಇದೆ ಎಂದು ಹೇಳಿದ್ದಾರೆ.
___





Be the first to comment