ಮಂಡ್ಯ ರವಿ ನಿಧನಕ್ಕೆ ಸೀತಾರಾಮ್ ಸಂತಾಪ

ಕನ್ನಡ ಕಿರುತೆರೆಯ ನಟ, ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರಧಾರಿ ಮಂಡ್ಯ ರವಿ ನಿಧಾನಕ್ಕೆ ಕಿರುತೆರೆ ನಿರ್ದೇಶಕ ಟಿ ಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಫೇಸ್ಬುಕ್‌ನಲ್ಲಿ ನಿರ್ದೇಶಕ ಸೀತರಾಮ್ “ಮಗಳು ಜಾನಕಿ ಯ ‘ಚಂದು ಭಾರ್ಗಿ’ ರವಿ ಅಸ್ತಂಗತ. ಇನ್ನೂ 42..ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ..ಅತ್ಯಂತ ಆಘಾತಕಾರಿ” ಎಂದು ಬರೆದಿದ್ದಾರೆ.

ಮಂಡ್ಯ ಮೂಲದ ರವಿ ಅವರ ಸಂಪೂರ್ಣ ಹೆಸರು ರವಿ ಪ್ರಸಾದ್. ಖ್ಯಾತ ನಿರ್ದೇಶಕ ಟಿಎನ್ ಸೀತರಾಮ್ ಅವರ ಅನೇಕ ಧಾರಾವಾಹಿಗಳಲ್ಲಿ ರವಿ ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ ಧಾರಾವಾಹಿ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಎಂಎ, ಎಲ್ ಎಲ್ ಬಿ ಓದಿರುವ ರವಿ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು.

ಟಿಎನ್‌ ಸೀತಾರಾಮ್‌ ಅವರ ಮಾಯಾಮೃಗ, ಮುಕ್ತ ಹಾಗೂ ಮಗಳು ಜಾನಕಿ ಧಾರವಾಹಿಗಳಲ್ಲಿ ನಟಿಸಿದ್ದ ರವಿ ಪ್ರಸಾದ್‌ ಅರ್ಧಾಂಗಿ, ವರಮಹಾಲಕ್ಷ್ಮೀ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ರವಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಬಿಜಿಎಸ್ ನಲ್ಲಿ ದಾಖಲಾಗಿದ್ದ ರವಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!