ಧ್ರುವ ಸರ್ಜಾ ವಿರುದ್ಧ ನೆರೆಹೊರೆಯವರಿಂದ ದೂರು

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಅವರ ಮನೆಗೆ ಆಗಮಿಸುವ ಅಭಿಮಾನಿಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಧ್ರುವ ಸರ್ಜಾ ಅವರ ನೆರೆಹೊರೆಯ ನಿವಾಸಿ ಮನೋಜ್ ಎಂಬುವವರು ಧ್ರುವ ಸರ್ಜಾ ಹಾಗೂ ಅವರ ಮ್ಯಾನೇಜರ್‌ ವಿರುದ್ಧ ದೂರು ನೀಡಿದ್ದು ಎಫ್‌ ಐಆರ್‌ ದಾಖಲು ಮಾಡುವಂತೆ ತಿಳಿಸಿದ್ದಾರೆ.   ಪೊಲೀಸರು  ಎನ್‌ಸಿಆರ್ ದಾಖಲು ಮಾಡಿಕೊಂಡು ಕಳುಹಿಸಿದ್ದಾರೆ.

ಧ್ರುವ ಸರ್ಜಾ ಅವರ ಮನೆಗೆ  ಆಗಮಿಸುವ ಅಭಿಮಾನಿಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಅಭಿಮಾನಿಗಳು ಬೈಕ್‌ಗಳನ್ನು ಅಡ್ಡಲಾಗಿ ಪಾರ್ಕ್ ಮಾಡುವುದು, ಮನೆಮುಂದೆ ಧೂಮಪಾನ ಮಾಡುವುದು,  ಗೋಡೆಗಳ ಮೇಲೆ ಉಗುಳುವುದು ಸೇರಿದಂತೆ ಅಸಭ್ಯ ವರ್ತನೆ ತೋರಿಸುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ರೀತಿಯ ಘಟನೆ ಇತ್ತೀಚೆಗೆ ನಟ ದರ್ಶನ್ ಅವರ ಅಭಿಮಾನಿಗಳ ವಿರುದ್ಧವೂ ವರದಿಯಾಗಿತ್ತು. ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ, ನಟನ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳ ಗಲಾಟೆ, ಕುಡಿದು ಬಂದು ಟೆರೇಸ್ ಹಾಗೂ ಕಾಂಪೌಂಡ್‌ಗಳಲ್ಲಿ ಕೂತು ಗದ್ದಲ ಮಾಡುವುದು ಸೇರಿದಂತೆ ಹಲವು ಆರೋಪಗಳು ನೆರೆಹೊರೆಯರಿಂದ ದಾಖಲಾಗಿದ್ದವು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!