ಕಾಲೇಜ್ ಕಲಾವಿದ

ಭರವಸೆ ಹುಟ್ಟಿಸಿದ ‘ಕಾಲೇಜ್ ಕಲಾವಿದ’ ಟ್ರೇಲರ್

ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ, ಆದರೇ ಈ ಸಿನೇಮಾ, ಟೈಟಲ್ ನಲ್ಲಿಯೇ ಗಮನ ಸೆಳೆಯುತ್ತಿದೆ. ಅದುವೇ ‘ಕಾಲೇಜ್ ಕಲಾವಿದ’. ಪ್ರತಿ ಕಾಲೇಜಿನಲ್ಲೂ ಕಲಾವಿದರು ಇದ್ದೆ ಇರುತ್ತಾರೆ. ಈ ಸಿನಿಮಾ ಮೂಲಕ ಕಾಲೇಜ್ ನಲ್ಲಿ ಕಲಾವಿದ ಹೇಗೆ ಹೊರಬರಲಿದ್ದಾನೆ ಎಂಬುದನ್ನ ನೋಡಬೇಕಿದೆ. ಸದ್ಯ ರಿಲೀಸ್ ಗೆ ರೆಡಿಯಾಗಿರೋ ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.

‘ಸಂಜಯ್ ಮಳವಳ್ಳಿ’ ಬರೆದು ನಿರ್ದೇಶನ ಮಾಡಿರುವ ಕಾಲೇಜ್ ಕಲಾವಿದ ಕುರಿತಂತೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರು “ಒಂದು ಪ್ರಯೋಗಾತ್ಮಕ ಲವ್ ಸ್ಟೋರಿ ಭಾವನೆಗಳನ್ನ ಹೇಳುವಂತ ಒಂದು ಕಥೆ ಆಗಿರುತ್ತೆ ಇದು ಅಂತಂದ್ರೆ ಪ್ರತಿಯೊಂದು ಪ್ರತಿಯೊಬ್ಬರ ಲೈಫ್ ಅಲ್ಲೂ ಒಂದು ಲವ್ ಅನ್ನೋದು ಹಾಗೆ ಆಗಿರುತ್ತೆ ಸೋ ಆ ಒಂದು ಲವ್ ಮತ್ತೆ ಏನೋ ಒಂದು ಮಿಸ್ಟೇಕ್ ಆಗಿ ಅಥವಾ ಏನೋ ಒಂದು ಸಮಸ್ಯೆಗಳಾಗಿ ದೂರ ಆಗಿರುತ್ತಾರೆ ಮತ್ತೆ ಅವರು ಚಿಗುರು ಹೊಡೆದು ಮತ್ತೆ ಅವರು ಸೇರ್ತಾರಾ ಅಥವಾ ಇಲ್ವಾ ಅನ್ನೋದೇ ನಮ್ಮ ಕಾನ್ಸೆಪ್ಟ್ ಮೇಜರ್ ಸಿನಿಮಾ ಡ್ರಗ್ಸ್ ಅಲ್ಲೇ ಇದೆ ಡ್ರಗ್ಸ್ ಕಂಟೆಂಟ್ ಇದೆ. ಡ್ರಗ್ಸ್ ಅಂತಹಾ ವಿಷಯ ಒಬ್ಬ ಒಳ್ಳೆಯವನ್ನ ಯಾವ ರೀತಿ ಕೆಟ್ಟವನಾಗಿ ಮಾಡಬಹುದು ಅನ್ನೋದನ್ನ ಈ ಕಥೆ ಮೂಲಕ ಹೇಳಲಾಗಿದೆ.

“ನಮ್ಮ ಸಿನಿಮಾದಲ್ಲಿ ನಾಲ್ಕು ಸಾಂಗ್ ಇದೆ ಮೂರು ಇದಾಗಲೇ ಯೂಟ್ಯೂಬಿನಲ್ಲಿದೆ. ಇನ್ನೊಂದು ಬಂದು ಒಂದು ಪ್ಯಾಥೋ ಸಾಂಗ್ ಇದೆ ಒಂದು ಕರೆದು ಬಿಡು ನಿನ್ನನ್ನ ಅಂತ ಹೇಳಿ ಅದು ಅದು ಸಿನಿಮಾ ರಿಲೀಸ್ ಆದ್ಮೇಲೆ ಒಂದು ಫೋರ್ ಫೈವ್ ಡೇಸ್ ಅಲ್ಲಿ ರಿಲೀಸ್ ಮಾಡೋಣ ಅಂತ ಅನ್ಕೊಂಡಿದೀವಿ ” ಎಂದರು.

ನಾನು ಪೀಣ್ಯದಲ್ಲಿ ಐರನ್ ಆಂಡ್ ಸ್ಟೀಲ್ ಪ್ಲಾಂಟ್ ಹೊಂದಿದ್ದೇನೆ. ಸಿನಿಮಾ ಮಾಡಬೇಕೆನ್ನುವ ಹಂಬಲ ಬಹಳ ದಿನದಿಂದ ಇತ್ತು. ಈ ಮೂಲಕ ಅದು ಸಾಕಾರವಾಗಿದೆ. ಇನ್ನು ನಾನು ಕಲಾವಿದನಲ್ಲ ಆದರೆ ನಿರ್ದೇಶಕರು ನನಗೆ ಸಿನಿಮಾದಲ್ಲಿ ಪ್ರಮುಖ ವಿಲನ್ ಪಾತ್ರ ಕೊಟ್ಟಿದ್ದಾರೆ. ಹೊಸಬರ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ.” ನಿರ್ಮಾಪಕರಾದ ತರುಣ್ ಶರ್ಮಾ ಹೇಳಿದ್ದಾರೆ.

ಕಾಲೇಜ್ ಕಲಾವಿದ

ಕಾಲೇಜ್ ಕಲಾವಿದ ಸಿನಿಮಾ ಜೂನ್ 6ಕ್ಕೆ ತೆರೆಗೆ ಬರುತ್ತಿದ್ದು ಸಿನಿಮಾವನ್ನು ಗಜಾನನ ಫಿಲ್ಮ್ಸ್ ಬ್ಯಾನರ್ ನಲ್ಲಿ ತರುಣ್ ಶರ್ಮಾ ನಿರ್ಮಾಣ ಮಾಡಿದ್ದು, ಆರವ್ ಸೂರ್ಯ ನಾಯಕರಾಗಿ‌ ಕಾಣಿಸಿಕೊಂಡಿದ್ದಾರೆ. ಚೈತ್ರ ಲೋಕನಾಥ್ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಹಾಗೂ ಹರಿಣಿ ಶ್ರೀಕಾಂತ್ ಹಾಗೂ ರಮೇಶ್ ಭಟ್,ಶೈಲಪುತ್ರಿ ಪೋಷಕ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ.

ನಿಖೀಲ್, ನಂದಿನಿ ,ದಿನೇಶ್ ಕುಲಕರ್ಣಿ, ನವೀನ್, ನಿರಂತ್ ಸೂರ್ಯ, ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಲವ್, ಕಮರ್ಷಿಯಲ್, ತ್ರಿಲ್ಲಿಂಗ್ ಜಾನಾರ್ ಇರುವ ಈ ಚಿತ್ರಕ್ಕೆ ಆನಂದ್ ಸುಂದರೇಶ ಛಾಯಾಗ್ರಹಣ ಮಾಡಿದ್ದಾರೆ. ಮಹೇಶ್ ಗಂಗಾವತಿ ಸಂಕಲನ, ಸಂಗೀತ ನಿರ್ದೇಶಕರಾಗಿ ಸುರಾಜ್ ಜೋಯಿಸ್ ಮ್ಯಾಜಿಕ್ ಮಾಡಲಿದ್ದಾರೆ. ಹಂಚಿಕೆದಾರರಾಗಿ ಶಾಲಿನಿ ಆರ್ಟ್ಸ್ ಚಿತ್ರಕ್ಕೆ ಸಾಥ್ ನೀಡಿದೆ. ರಮೀತ್ ಏಲಕ್ಕಿ ಚಿತ್ರದ ಪ್ರಮೋಷನ್ ಅನ್ನು ಕೈಗೆತ್ತಿಕೊಂಡಿದ್ದಾರೆ.ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಕಾಲೇಜ್ ಕಲಾವಿದ ಇದೊಂದು ಪ್ರಯೋಗಾತ್ಮಕ ಪ್ರೀತಿಯ ಪಯಣದ ಕಥೆಯಾಗಿದೆ.

ಟ್ರೈಲರ್ ಲಾಂಚ್ ಗೆ ಆಗಮಿಸಿದ್ದ ನಟ ಪ್ರಥಮ್, ಕಾಕ್ರೋಚ್ ಸುಧಿ, ಕೋಟೆ ಪ್ರಭಾಕರ್ ಇನ್ನು ಮೊದಲಾದವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾಲೇಜ್ ಕಲಾವಿದ

Be the first to comment

Leave a Reply

Your email address will not be published. Required fields are marked *

Translate »
error: Content is protected !!