ಮುಂಬರುವ ಜುಲೈ ತಿಂಗಳಿನಲ್ಲಿ ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ಚಿತ್ರ ಗಳಿಕೆಯ ಸಂಬಂಧ ಸ್ಪರ್ಧೆ ಏರ್ಪಡಲಿದೆ.
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವದಾದ್ಯಂತ ಆರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹಿಂದಿಯಲ್ಲೂ ಸಿನಿಮಾ ಬಿಡುಗಡೆ ಆಗಲಿದೆ. ಅಜಯ್ ದೇವಗನ್ ಅಭಿನಯದ ‘ಥ್ಯಾಂಕ್ ಗಾಡ್’ ಸಿನಿಮಾ ಜುಲೈ 29 ರಂದು ರಿಲೀಸ್ ಆಗಲಿದ್ದು ಗಳಿಕೆಯಲ್ಲಿ ಎರಡು ಚಿತ್ರಗಳ ನಡುವೆ ಸ್ಪರ್ಧೆ ನಡೆಯಲಿದ್ದು ಕುತೂಹಲ ಮೂಡಿಸಿದೆ.
ಈ ಹಿಂದೆ ಹಿಂದಿ ರಾಷ್ಟ್ರ ಭಾಷೆಯ ವಿಚಾರಕ್ಕೆ ಈ ಇಬ್ಬರು ನಟರ ನಡುವೆ ಟ್ವೀಟ್ ಸಮರ ನಡೆದಿತ್ತು. ಈಗ ಈ ನಟರ ಅಭಿನಯದ ಸಿನಿಮಾಗಳು ಕಲೆಕ್ಷನ್‌ನಲ್ಲಿ ಜಿದ್ದಾಜಿದ್ದಿ ನಡೆಸುವ ಸಂದರ್ಭ ಎದುರಾಗಿದೆ.
‘ಕೆಜಿಎಫ್ 2’ ರೀತಿ ‘ವಿಕ್ರಾಂತ್ ರೋಣ’ ಭರ್ಜರಿ ಕಲೆಕ್ಷನ್ ಮಾಡಿದರೆ ಬಾಲಿವುಡ್ ಸಿನಿಮಾಗಳಿಗೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇದೆ. ಸಿನಿ ಪ್ರೇಕ್ಷಕರಿಗೆ ‘ವಿಕ್ರಾಂತ್ ರೋಣ’ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದರಿಂದ “ರೋಣ” , ‘ಕೆಜಿಎಫ್’ ದಾಖಲೆಯನ್ನ ಮುರಿದು ಹಾಕುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಸುದೀಪ್, ” ಹಿಂದಿ ಈಗ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ. ದಕ್ಷಿಣದ ಸಒಳ್ಳೆಯ ಸಿನಿಮಾಗಳು ಎಲ್ಲಾ ಭಾಷೆಗೂ ಹೋಗುತ್ತವೆ. ಹೀಗಾಗಿ ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಕರೆಯಬೇಡಿ” ಎಂದು ಹೇಳಿದ್ದರು.
ಇದಕ್ಕೆ ಅಜಯ್ ದೇವಗನ್ ಟ್ವಿಟರ್ ಮೂಲಕ ಕಿಚ್ಚ ಹೇಳಿಕೆಗೆ ತಿರುಗೇಟು ನೀಡಿ ಹಿಂದಿ ರಾಷ್ಟ್ರ ಭಾಷೆ. ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ಸುದೀಪ್ ಖಾರವಾಗಿ ಉತ್ತರಿಸಿದ್ದು, ಹಿಂದಿ ರಾಷ್ಟ್ರ ಭಾಷೆಯಲ್ಲ. ಇಲ್ಲಿರುವ ಎಲ್ಲಾ ಭಾಷೆ ಸಿನಿಮಾಗಳು ಭಾರತೀಯ ಸಿನಿಮಾಗಳು ಎಂದು ಹೇಳಿದ್ದರು.
___
Be the first to comment