‘ಕೊರೋನಾ’ ಜಾಗೃತಿ ಹಾಡು ಬಿಡುಗಡೆ

ಕೊರೋನಾ ಹಾವಳಿಯಿಂದ ಇಡೀ ರಾಜ್ಯವೇ ಕಂಗೆಟ್ಟಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸ್ಫೂರ್ತಿ ತುಂಬುವ ಪ್ರಯತ್ನವಾಗಿ ಕರೋನಾ ಬಗ್ಗೆ ಜಾಗೃತಿ ಮೂಡಿಸುವ ಹಾಡೊಂದನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಹಾಗೂ ನಗರ ಪೊಲೀಸ್ ಆಯುಕ್ತರಾದ ಶ್ರೀ ಭಾಸ್ಕರ್ ರಾವ್ ಅವರು ಬಿಡುಗಡೆಗೊಳಿಸಿ ಹಾಡನ್ನು ಕೇಳಿ ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.

ಯೋಗರಾಜ್‌ ಭಟ್‌, ಅರ್ಜುನ್‌ ಜನ್ಯ ಹಾಗೂ ವಿಜಯ್‌ ಪ್ರಕಾಶ್‌ ಜೊತೆಗೂಡಿ ರಚಿಸಿದ ” ಯಾರೊ ನೀನು ಮಾನವಾ… ಕೇಳುತ್ತಿಹುದು ಕೊರೋನಾ… ” ಎಂಬ ಕೊರೋನಾ ಜಾಗೃತಿ ಹಾಡು ವಿಭಿನ್ನವಾದ್ದು, ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದು ಹಾಡನ್ನು ನಿರ್ದೇಶಿಸಿದ್ದಾರೆ.

ಈ ಹಾಡಿಗೆ‌ ಅರ್ಜುನ್‌ ಜನ್ಯ ಸಂಗೀತ ನೀಡಿದರೆ, ಗಾಯಕ ವಿಜಯ್‌ ಪ್ರಕಾಶ್ ದನಿಯಾಗಿದ್ದಾರೆ. ಇಂತಹ ಸ್ಟಾರ್ ಕಾಂಬಿನೇಷನ್​ ಜೋಡಿಗಳು ಒಟ್ಟಿಗೆ ಸೇರಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಹಾಡಿಗೆ ಜೀವ ಕೊಟ್ಟಿದ್ದಾರೆ.

ಈ ಒಂದು ಹಾಡಿನ ಚಿತ್ರೀಕರಣಕ್ಕೆ ಕೊರೋನಾ ವಾರಿಯರ್ಸ್ ಗಳನ್ನು ಬಳಸಿಕೊಂಡಿರುವುದು ವಿಶೇಷ. ಯಾಕೆಂದರೆ ಹಗಲಿರುಳೆನ್ನದೆ ಕೊರೋನಾ ನಿಯಂತ್ರಣಕ್ಕೆ ಕೆಲಸ ಮಾಡುತ್ತಿರುವ ನಗರದ ಪೊಲೀಸ್ ಕಮಿಷನರ್ , ಡಿಸಿಪಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಒಳಗೊಂಡು, ಪ್ರಾಣದ ಹಂಗನ್ನು ತೊರೆದು ಸೇವೆ ಮಾಡುತ್ತಿರುವ ಡಾಕ್ಟರ್ಸ್ , ನರ್ಸ್ ಗಳು , ಆಶಾ ಕಾರ್ಯಕರ್ತರು , ಪೌರ ಕಾರ್ಮಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಕೆಲಸವನ್ನು ಕೂಡಾ ಯೋಗರಾಜ್ ಭಟ್ ಗುರುತಿಸಿದ್ದು, ಎಲ್ಲರ ಶ್ರಮವನ್ನು ಒಂದು ಉತ್ತಮ ಹಾಡಿನ ಮೂಲಕ ಚಿತ್ರೀಕರಿಸಿ ಅಧಿಕೃತವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳ ಮೂಲಕ ಲೋಕಾರ್ಪಣೆ ಮಾಡಿಸಿದ್ದು , ಈಗ ಯೂ ಟ್ಯೂಬ್ನಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!