ಸಿಎಂ ಸಿದ್ದರಾಮಯ್ಯ ಅವರು ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಚಿತ್ರವನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ‘ಲ್ಯಾಂಡ್ ಲಾರ್ಡ್’ ಚಿತ್ರತಂಡ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಚಿತ್ರವನ್ನು ನೋಡುವುದಾಗಿ ಹೇಳಿದರು.
“ಲ್ಯಾಂಡ್ ಲಾರ್ಡ್ ಸಿನಿಮಾ ನಾನು ನೋಡುತ್ತೇನೆ. ಎಲ್ಲರೂ ಇದನ್ನು ನೋಡಬೇಕಿದೆ. ಇಲ್ಲಿ ಸಮಾಜದ ವಾಸ್ತವಿಕತೆಯನ್ನು ಚಿತ್ರದ ಮೂಲಕ ತಿಳಿಸುವ ಯತ್ನವನ್ನು ಮಾಡಲಾಗಿದೆ. ಸಿನಿಮಾ ಸಂವಿಧಾನ, ಜಾತಿ, ಶೋಷಣೆ, ಗುಲಾಮಗಿರಿ ಇದರ ವಿರುದ್ಧದ ಕಥೆ ಹೊಂದಿದೆ. ದುನಿಯಾ ವಿಜಯ್, ನಿರ್ದೇಶಕ ಜಡೇಶ್ ಅವರಿಗೆ ಅಭಿನಂದನೆಗಳು” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಲ್ಯಾಂಡ್ ಲಾರ್ಡ್ ಚಿತ್ರ ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಭೂ ಮಾಲೀಕನ ವಿರುದ್ಧ ಕೂಲಿ ಕಾರ್ಮಿಕನೊಬ್ಬ ಹೋರಾಡುವ ಕಥೆಯನ್ನು ಚಿತ್ರ ಹೊಂದಿದೆ. ಕೂಲಿ ಕಾರ್ಮಿಕ ರಾಚಯ್ಯನ ಪಾತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಜಮೀನ್ದಾರನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಶೆಟ್ಟಿ ಮನೋಜ್ಞವಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಕೋಲಾರ ಭಾಗದ ಭಾಷೆಯನ್ನು ಬಳಸಲಾಗಿದೆ. ಇದು ಕೋಲಾರದಲ್ಲಿ 80 -90ರ ದಶಕದಲ್ಲಿ ನಡೆಯುವ ಕತೆಯನ್ನು ಹೊಂದಿದೆ.

—-





Be the first to comment