ವಿಶಾಲ್ ಆರೋಗ್ಯದ ಬಗ್ಗೆ ಸ್ಪಷ್ಟನೆ

ನಟ ವಿಶಾಲ್ ಆರೋಗ್ಯದ ಬಗ್ಗೆ ಹರಡಿರುವ ಎಲ್ಲ ವದಂತಿಗಳಿಗೆ ವಿಶಾಲ್ ಮ್ಯಾನೇಜರ್ ಹರಿ ಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.

ವಿಶಾಲ್ ವೈರಲ್ ಜ್ವರದಿಂದ  ಬಾಡಿ ಪೇನ್‌ ಮತ್ತು ಸುಸ್ತು ಅನುಭವಿಸುತ್ತಿದ್ದಾರೆ. ಹೀಗಾಗಿ ವೈದ್ಯರು ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ವಿಶಾಲ್ ಅವರ ಸ್ಥಿತಿಯ ವದಂತಿಗಳನ್ನು ನಂಬಬೇಡಿ.  ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಕೆಲ ದಿನಗಳಿಂದ ತಮಿಳು ಚಿತ್ರರಂಗದಲ್ಲಿ   ವಿಶಾಲ್ ಆರೋಗ್ಯದ ಕುರಿತಾಗಿಯೇ ಸುದ್ದಿಗಳು ಹರಿದಾಡುತ್ತಿದೆ. 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ಮದಗಜರಾಜ ಚಿತ್ರ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ವಿಶಾಲ್ ಅವರನ್ನು ಕಂಡು ಪ್ರತಿಯೊಬ್ಬರು ಶಾಕ್ ಆಗಿದ್ದರು. ವೇದಿಕೆಯ ಮೇಲೆ ನಡುಗುವ ಕೈಗಳಿಂದಲೇ ಮೈಕ್ ಹಿಡಿದು ತೊದಲು ಮಾತನಾಡಿದ್ದು ವಿಶಾಲ್ ಕಂಡು ಹಲವರು ಕಣ್ಣೀರು ಹಾಕಿದ್ದರು. ಬಳಿಕ ನಟನ ಆರೋಗ್ಯದ ಬಗ್ಗೆ ಹಲವು ವದಂತಿಗಳು ವೈರಲ್‌ ಆದವು.

2012ರಲ್ಲಿ ಸುಂದರ್ ಸಿ ನಿರ್ದೇಶನದ  ‘ಮದಗಜರಾಜ’ ಚಿತ್ರೀಕರಣ  ವೇಗದಲ್ಲಿ ಮುಗಿದಿತ್ತು. 2012ರಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇತ್ತು.  ಕಾರಣಾಂತರದಿಂದ ರಿಲೀಸ್ ಆಗಲಿಲ್ಲ. ಇದೀಗ ಸಂಕ್ರಾಂತಿ ಸಂದರ್ಭ ಚಿತ್ರ  ತೆರೆಗೆ ಬರಲು ಸಜ್ಜಾಗಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!