ಟಾಲಿವುಡ್ ಕ್ವೀನ್ ಸಮಂತಾ ರುತು ಪ್ರಭು ಅವರು ನಿರ್ದೇಶಕ ರಾಜ್ ನಿಧಿಮೋರು ಜೊತೆ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂದು ಬರುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸಮಂತಾ ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ.
“ಅವೆಲ್ಲವೂ ಕೇವಲ ವದಂತಿಗಳು. ಅವರಿಬ್ಬರ ನಡುವಿನದ್ದು ಕೇವಲ ವೃತ್ತಿಪರ ಸ್ನೇಹ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣದ ಸ್ಟಾರ್ ನಾಯಕಿ ಸಮಂತಾ ರುತ್ ಪ್ರಭು ನಾಯಕಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ ಯಶಸ್ವಿಯಾಗಿದ್ದಾರೆ. ನಿರ್ಮಾಪಕಿಯಾಗಿ ತಮ್ಮ ಮೊದಲ ಚಿತ್ರ ‘ಶುಭಂ’ ಯಶಸ್ಸಿನ ಬಗ್ಗೆ ಸಮಂತಾ ಸಂತೋಷ ವ್ಯಕ್ತಪಡಿಸಿದ್ದಾರೆ.
“ನಮ್ಮ ಮೊದಲ ಹೆಜ್ಜೆಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಸಮಂತಾ ಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೈಯೋಸಿಟಿಸ್ ನಿಂದ ಬಳಲುತ್ತಿದ್ದ ಸಮಂತಾ ಈಗ ಚೇತರಿಸಿಕೊಂಡಿದ್ದಾರೆ. ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಸಮಂತಾ ರುತು ಪ್ರಭು ಅವರ ಲವ್ ಲೈಫ್ ಆಗಾಗ ಚರ್ಚೆಯಲ್ಲಿರುತ್ತದೆ. ನಿರ್ದೇಶಕ ರಾಜ್ ನಿಧಿಮೋರು ಜೊತೆ ಅವರು ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಮ್ಯಾನೇಜರ್ ಸ್ಪಷ್ಟನೆ ವದಂತಿಗಳಿಗೆ ಕಡಿವಾಣ ಹಾಕುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
—-

Be the first to comment