ಕನ್ನಡಕ್ಕೆ ಮತ್ತೊಂದು ಓಟಿಟಿ- ಡಾ.ಶಿವರಾಜಕುಮಾರ್‌ ಚಾಲನೆ

ಕರೋನ ಬಂದಾಗಿನಿಂದ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಪ್ರದರ್ಶನಕ್ಕೆ ಸಿದ್ದವಾದ ಹಾಗೂ ಶೂಟಿಂಗ್ ಹಂತದಲ್ಲಿರುವ ಹಲವು ಸಿನಿಮಾಗಳು ಸ್ಥಗಿತವಾಗಿದ್ದರಿಂದ ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕವರ್ಗ, ಕಲಾವಿದರು ಮುಂದೇನು ಎಂದು ಗೊಂದಲ್ಲದಲ್ಲಿ ಇದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡಿಗರೇ ಸೇರಿಕೊಂಡು ’ಸಿನಿಮಾನೋಡಿ ಡಾಟ್ ಇನ್’ ಹೆಸರಿನೊಂದಿಗೆ ತಂಡವನ್ನು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಹೂಡಿಕೆದಾರರು, ಡೆವಲಪರ್ ಮತ್ತು ಸಿನಿಪ್ರಿಯರು ಸೇರಿಕೊಂಡಿರುವುದು ಮತ್ತು ಓಟಿಟಿಗಿಂತ ಭಿನ್ನವಾಗಿರುವುದು ವಿಶೇಷ. ಅಡ್ವಾನ್ಸ್ ಕ್ಲೌಡ್ ಟೆಕ್ನಾಲಜಿಯೊಂದಿಗೆ ಸದರಿ ಯೋಜನೆ ಇರಲಿದೆ. ವೀಕ್ಷಕರು ಚಂದಾದಾರರಾಗಬೇಕಿಲ್ಲ. ಜಾಹಿರಾತು ಮುಕ್ತವಾಗಿದೆ. ವೀಕ್ಷಕರ ಇಚ್ಚೆಯ ಸಿನಿಮಾ ನೋಡುವ ವೇದಿಕೆಯಾಗಿರುತ್ತದೆ. ಆಧುನಿಕ ತಂತ್ರಜ್ಞಾನದ ಸವಲತ್ತುಗಳು ಇರುತ್ತದೆ. ವೆಬ್, ಪ್ಲೇಸ್ಟೋರ್, ಆಪ್‌ಸ್ಟೋರ್, ಫೈರ್‌ಟಿವಿ ಮತ್ತು ರೋಕು ಈ ಐದು ವೇದಿಕೆಗಳಲ್ಲಿ ಚಿತ್ರವನ್ನು ನೋಡಬಹುದು. ಈಗ ತಕ್ಷಣದಲ್ಲಿ ವೆಬ್ “cinemanodi.in”ಲಭ್ಯವಿದ್ದು ಒಂದುವಾರದಲ್ಲಿ ಆಪ್ ಪ್ಲೇಸ್ಟೋರ್ ಆಪ್ ಸ್ಟೋರ್ ಫೈರ್ ಟಿವಿ ಮತ್ತು ರೋಕು ನಲ್ಲಿ ಲಭ್ಯವಾಗುತ್ತದೆ.

ಕೇಂದ್ರ ಸೆನ್ಸಾರ್ ಬೋರ್ಡ್‌ನ ನಿವೃತ್ತ ಅಧಿಕಾರಿ ನಾಗೇಂದ್ರ ಸ್ವಾಮಿ, ಶಾಂತಾಕುಮಾರಿ ಹಾಗೂ ಇತರೆ ಆಸಕ್ತರ ಸಾರಥ್ಯದಲ್ಲಿ ವೇದಿಕೆಯು ನಡೆಯುತ್ತಿದೆ. ಈಗಾಗಲೇ ಹಳೆಯ ಮತ್ತು ಹೊಸ ನೂರು ಚಿತ್ರಗಳು, ೨೦೦ ಹಾಡುಗಳು ಸ್ಟೋರ್ ಆಗಿದೆ. ನಿರ್ಮಾಪಕರು ಹಾಗೂ ಕಂಟೆಂಟ್ ಮಾಲೀಕರು ತಮ್ಮ ಚಿತ್ರಗಳ ಕುರಿತಂತೆ ಸಂಪರ್ಕಿಸಿದಲ್ಲಿ, ಅವರಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ವೀಕ್ಷಕರಿಗೆ ಹೊರೆಯಾಗದ ದರದಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸುವ ಭರವಸೆಯನ್ನು ತಂಡವು ನೀಡಲಿದೆ. ದರವು ಕನಿಷ್ಟ ರೂ.30 ರಿಂದ 100ರ ವರೆವಿಗೆ ಇರಲಿದೆ.

’ಸಿನಿಮಾ ನೋಡಿ’ ವೇದಿಕೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಲರ್ ನಲ್ಲಿ ಮೂಡಿ ಬಂದಿರುವ ’ಕಸ್ತೂರಿ ನಿವಾಸ’ ಚಿತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಕನ್ನಡದವರೇ ಸೇರಿಕೊಂಡು ಮಾಡಿರುವ ಪ್ಲಾಟ್‌ಫಾರ್ಮ್ ಬೇರೆಯದಕ್ಕಿಂತ ಭಿನ್ನವಾಗಿದೆ ಅಂತ ತಿಳಿದು ಬಂದಿದೆ. ಇದರ ಮೂಲಕವಾದರೂ ಕನ್ನಡ ಚಿತ್ರರಂಗ ಬೆಳೆದು, ನಿರ್ಮಾಪಕರುಗಳಿಗೆ ಹೆಚ್ಚು ಅನುಕೂಲವಾಗಲೆಂದು ತಂಡಕ್ಕೆ ಶುಭ ಹಾರೈಸಿದರು

Be the first to comment

Leave a Reply

Your email address will not be published. Required fields are marked *

Translate »
error: Content is protected !!