ಚಂದನವನದ ಸಿನಿಮಾ ನಿರ್ಮಾಪಕರಿಗೆ ಉತ್ತಮ ಸಹಕಾರ ನೀಡಲು ಮುಂದಾಗಿದ್ದಾರೆ ಕಾರ್ತಿಕ್ ಸ್ಟುಡಿಯೋ. ಸಾಮಾನ್ಯವಾಗಿ ಒoದು ಚಿತ್ರ ನಿರ್ಮಾಣ ಮಾಡುವುದು ತುಂಬಾ ಕಷ್ಟ ಅನ್ನೋ ಮಾತಿತ್ತು. ಆದರೆ ಈಗ ನಿರ್ಮಾಪಕರಿಗೆ ಬಹಳ ಅನುಕೂಲ ಆಗುವಂಥ ವ್ಯವಸ್ಥೆ ಇಲ್ಲಿದೆ.
ಹೌದು ಬೆಂಗಳೂರಿನ ಹಾಟ್ ಸ್ಪಾಟ್ ಭಾಷ್ಯಂ ಸರ್ಕಲ್ ನಲ್ಲಿರುವ ಕಾರ್ತಿಕ್ ಸ್ಟುಡಿಯೋ ನಿರ್ಮಾಪಕರಿಗೆ ಅನುಕೂಲವಾಗುವಂತ ಪೂರ್ಣಪ್ಯಾಕೇಜ್ ಸ್ಟುಡಿಯೋ ಸಿದ್ಧವಿದ್ದು , ಈಗಾಗಲೇ 30 ಕ್ಕೂ ಹೆಚ್ಚು ಚಿತ್ರಗಳು ಕಾರ್ಯ ನಿರ್ವಹಿಸುತ್ತಿದೆ. ಈ ಸ್ಟುಡಿಯೋಸ್ ನ ಮಾಲಿಕರಾದ ಕಾರ್ತಿಕ್ ವೆಂಕಟೇಶ್ ರನ್ನ ಭೇಟಿ ಮಾಡಿದ್ರೆ , ನಿಮಗೆ ಚಿತ್ರ ಆರಂಭ ದಿಂದ ಬಿಡುಗಡೆ ವರೆಗೂ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲ್ಲಿದ್ದಾರೆ. ತಮ್ಮ ಜಾಜ್ಸ ಕ್ರಿಯೇಟಿವ್ ಇನ್ ಮೂಲಕ ಪೂರ್ಣ ಪ್ರಮಾಣದ ಯೂನಿಟ್ , ಮ್ಯೂಸಿಕ್ , ಕ್ಯಾಮೆರಾ ಬಾಡಿಗೆ ಪ್ರೀ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾಡಿಕೊಡಲ್ಲಿದ್ದಾರೆ.
ಸುಮಾರು ಹನ್ನೊಂದು ವರ್ಷಗಳ ಈ ಸ್ಟುಡಿಯೋ ಕಾರ್ಯದಲ್ಲಿ ಸಕ್ರಿಯರಾಗಿದ್ದು , ನಿರ್ಮಾಪಕರಿಗೆ ಸಂಪೂರ್ಣ ಅನುಕೂಲವಾಗುವಂಥ ವ್ಯವಸ್ಥೆಯನ್ನು ನೀಡುತ್ತಾ ಬಂದಿದ್ದಾರೆ. ಲಾಕ್ ಡೌನ್ ಸಡಿಲಿಕೆಯ ನಂತರ ಚಿತ್ರ ಚಟುವಟಿಕೆಯ ಕೆಲಸಗಳು ಜೋರಾಗಿ ಆರಂಭವಾಗಿದೆ. ಆ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ರ ಕಾರ್ತಿಕ್ ಸ್ಟುಡಿಯೋದಲ್ಲಿ ಸಿನಿಮಾಗಳ ಕೆಲಸಗಳು ಜೋರಾಗಿದೆ.
ಈಗಾಗಲೇ “ಸಿಂಧೂರ” , “ಮರೆಯದೆ ಕ್ಷಮಿಸು” , “ಇಲ್ಲೋoದು ಸಮಸ್ಯೆ ಇದೆ ” , “ಎಲ್ಲಿ ಜಾರಿತೋ ಮನಸ್ಸು” , “ಲ್ಯಾಂಬರ” , “ಕಾಂಚಿ” , “ಬಯಲು” , ” ಮಂಗಾಪುರ”, “ರಾಮದೂತ” , “ಟೆಡ್ಡಿ ಬೇರ್” , “ಲೆಕ್ಕಾಚಾರ” , ” ಎಕ್ಸ್ ಎಂಪ್ಲಾಯ್ “, “ಸೈಕೋಪಾತ್” , “ಎವಿಡೆನ್ಸ್ ” , “ಅದೊಂದುರಲ್ಲಿ” ಹಾಗೂ ಹಿಂದಿಯ “ಹಲೋ ಕೌನ್” ಚಿತ್ರಗಳು ಕಾರ್ತಿಕ್ ಸ್ಟುಡಿಯೊದಲ್ಲಿ ಕೆಲಸವನ್ನು ಆರಂಭಿಸಿದೆ.
ಈ ಸ್ಟುಡಿಯೊ ಬಹಳಷ್ಟು ಬ್ಯೂಸಿ ಆಗಿದ್ದು , ಪೋಸ್ಟ್ ಪ್ರೊಡಕ್ಷನ್ ಕೆಲಸಗಳಾದ ಮ್ಯೂಸಿಕ್ , ಟೋಟಲ್ ಫಿಲ್ಮ್ ಪ್ಯಾಕೇಜ್ , ಡಬ್ಬಿಂಗ್, ರೀ- ರೆಕಾರ್ಡಿಂಗ್, ಮಿಕ್ಸಿಂಗ್, ಸಾಂಗ್ ರೆಕಾರ್ಡಿಂಗ್ , ಕ್ಯಾಮೆರಾ , ಶೂಟಿಂಗ್ ಯೂನಿಟ್ ಸೇರಿದಂತೆ ಹಲವು ಕೆಲಸಗಳು ಚುರುಕುಗೊಂಡಿದೆ.
ಸುಮಧುರ ಸಂಗೀತವನ್ನು ನೀಡುವುದರ ಜೊತೆಗೆ ಚಿತ್ರಗಳಿಗೆ ಸಾಹಿತಿಯವನ್ನು ಬರೆಯುತ್ತಾ ಚಿತ್ರತoಡದವರಿಗೆ ಬೆನ್ನೆಲುಬಾಗಿ ನಿಂತು , ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಸಹಕಾರಿಯಾಗಿ ಸಂಗೀತ ನಿರ್ದೇಶಕ ಹಾಗೂ ಸ್ಟುಡಿಯೋದ ಮಾಲೀಕ ಕಾರ್ತಿಕ್ ವೆಂಕಟೇಶ್ ಕೂಡ ಕೆಲಸ ಮಾಡುತ್ತಿದ್ದಾರೆ.
ಸುಮಾರು ನೂರಕ್ಕೂ ಅಧಿಕ ಚಿತ್ರಗಳು ಕೆಲಸ ಕಾರ್ತಿಕ್ ಸ್ಟುಡಿಯೋದಲ್ಲಿ ನಡೆದಿದ್ದು , ಬಹಳಷ್ಟು ಕನಸುಗಳನ್ನು ಹೊತ್ತುಕೊಂಡಿದ್ದು ಬರುವಂತ ಹೊಸಬರು , ಹಳಬರು ನಿರ್ಮಾಪಕ , ನಿರ್ದೇಶಕರಿಗೆ ಸಹಕಾರಿಯಾಗುವಂತಹ ಮತ್ತೊಂದು ನೂತನ ಸುಸಜ್ಜಿತ ಸ್ಟುಡಿಯೋವನ್ನು ನಿರ್ಮಿಸಿಕೊಂಡು ಪ್ರಿ- ಪ್ರೊಡಕ್ಷನ್, ಪೋಸ್ಟ್- ಪ್ರೊಡಕ್ಷನ್ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದು ಸ್ಕ್ರಿಪ್ಟ್‍ನಿಂದ ಚಿತ್ರ ಬಿಡುಗಡೆಯಾಗುವವರೆಗೂ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುವ ಮೂಲ ಉದ್ದೇಶವನ್ನು ಇವರು ಹೊಂದಿದ್ದಾರೆ.
ಒಟ್ನಲ್ಲಿ ಕಾರ್ತಿಕ್ ಸ್ಟುಡಿಯೋ ಗೆ ಬರುವಂತಹ ಚಿತ್ರ ತಂಡಗಳಿಗೆ ಬಹಳಷ್ಟು ಅನುಕೂಲ ಆಗಲಿದ್ದು , ಅದರ ಸದುಪಯೋಗಪಡಿಸಿಕೊಳ್ಳಲಿ ಎಂಬುದು ಸ್ಟುಡಿಯೋ ಮಾಲೀಕರಾದ ಕಾರ್ತಿಕ್ ವೆಂಕಟೇಶ್ ರವರ ಉದ್ದೇಶವಾಗಿದೆ.
Be the first to comment