ಧಾರಾವಾಹಿ ಶೂಟಿಂಗ್ ಮಾಡಲು ಕೆಲವು ದಿನಗಳ ಹಿಂದೆ ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನಲೆಯಲ್ಲಿ ಸಿನಿಮಾ ಕೆಲಸಕ್ಕೂ ಅವಕಾಶ ಕೊಡಿ ಎಂದು ಕೇಳಲಾಗಿತ್ತು. ಅದರಂತೆ ಸರ್ಕಾರ ಈ ಮನವಿಗೆ ಸ್ಫಂದಿಸಿದೆ. ಹಾಗಾದರೆ ಸಿನಿಮಾ ಶೂಟಿಂಗ್ ವಿಚಾರವಾಗಿ ಸರ್ಕಾರ ಹೇಳಿದ್ದೇನು?
ಇಡೀ ದೇಶವೇ ಕರೋನಾ ಸಂಕಷ್ಟದಲ್ಲಿ ಸಿಲುಕಿ ಲಾಕ್ ಡೌನ್ ಆಗಿದೆ. ಅದರಲ್ಲೂ ಕೆಲವು ಕಡೆ ಆರ್ಥಿಕ ಮುಗ್ಗಟ್ಟಿನ ಹೊರಬರಲು ಸರ್ಕಾರ ಕೆಲವು ವ್ಯಾಪಾರ ವಹಿವಾಟಿಗೆ ಸಡಿಲಿಕೆಯನ್ನು ಮಾಡಿಕೊಟ್ಟಿದೆ. ಆ ನಿಟ್ಟಿನಲ್ಲಿ ಚಿತ್ರೋದ್ಯಮಕ್ಕೊ ಕೂಡ ಚಿತ್ರ ಚಟುವಟಿಕೆಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಂದ ಅನುಮತಿ ಕೊಡಿಸಿ ಎಂದು ಕಂದಾಯ ಸಚಿವ ಆರ್. ಅಶೋಕ್ ಗೆ ನಿರ್ಮಾಪಕ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಪದಾಧಿಕಾರಿಗಳಾದ ಕೆ .ಮಂಜು, ಎಂ.ಜಿ. ರಾಮಮೂರ್ತಿ, ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎ. ಗಣೇಶ್ ಹಾಗೂ ಕಾರ್ಮಿಕರ ಒಕ್ಕೂಟದಿಂದ ರವಿಶಂಕರ್ ಮನವಿ ಸಲ್ಲಿಸಿದ್ದರು,
ಈ ಕುರಿತು ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಮಾತನಾಡಿ ನಮ್ಮ ಮನವಿಗೆ ಸರಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು , ಚಿತ್ರೀಕರಣ ಮಾಡುವುದು ಕಷ್ಟವಾಗಬಹುದು. ಆದರೆ ಉಳಿದ ಚಿತ್ರ ಚಟುವಟಿಕೆಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರಂತೆ.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳಾದ ಡಬ್ಬಿಂಗ್, ರೀ-ರೆಕಾರ್ಡಿಂಗ್, ಮಿಕ್ಸಿಂಗ್ , ಗ್ರಾಫಿಕ್ಸ್ , ಹಾಗೂ ಇನ್ನಿತರೆ ಕೆಲಸಗಳಿಗೆ ಯಾವುದೇ ತೊಂದರೆ ಇಲ್ಲದoತೆ ಅಂತರವನ್ನು ಕಾಯ್ದುಕೊಂಡು ಸರಕಾರದ ನಿಯಮವನ್ನು ಪಾಲಿಸಿಕೊಂಡು ಕೆಲಸವನ್ನು ಮಾಡಿಕೊಳ್ಳಲು ಒಪ್ಪಿದ್ದಾರೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರು ಈ ಸಂಜೆಗೆ ತಿಳಿಸಿದ್ದಾರೆ.
Pingback: CI CD