ನ.19ರಂದು ತೆರೆಗೆ ಬರಲು 100 ತಯಾರಿ

ಸೈಬರ್‌ ಕ್ರೈಮ್‌, ಸಾಮಾಜಿಕ ಜಾಲತಾಣಗಳಿಂದ ಆಗುವ ಅಪರಾಧಗಳನ್ನು ಇಟ್ಟುಕೊಂಡು ತಯಾರಾಗಿರುವ ‘100’ ಸಿನಿಮಾ ನವೆಂಬರ್ 19 ರಂದು ತೆರೆಗೆ ಬರಲಿದೆ. ಬಹು ನಿರೀಕ್ಷಿತ ಈ ಸಿನಿಮಾವನ್ನು ರಮೇಶ್‌ ಅರವಿಂದ್‌ ನಿರ್ದೇಶನ ಮಾಡಿದ್ದಾರೆ. ಚಿತ್ರ ಬಿಡುಗಡೆ ದಿನಾಂಕವನ್ನು ರಮೇಶ್ ಅರವಿಂದ್ ಈಗಾಗಲೇ ಘೋಷಿಸಿದ್ದಾರೆ.

” 100…ನಾನು v/s ಒಬ್ಬ ಸೈಬರ್ ಕ್ರಿಮಿನಲ್..Come..Watch the fight..Nov19ರಿಂದ..ಚಿತ್ರಮಂದಿರಗಳಲ್ಲಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಕೌಟುಂಬಿಕ ಕಥೆ ಹೊಂದಿದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಕಾತರನಾಗಿದ್ದೇನೆ ಎಂದು ರಮೇಶ್ ಹೇಳಿದ್ದಾರೆ. ಗಾಳಿಪಟ-2 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರು ತಮ್ಮ ಬ್ಯಾನರ್ ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ರಮೇಶ್ ಅರವಿಂದ್ ಅವರು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ರಚಿತಾ ರಾಮ್, ರಮೇಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರೂ ಪುಷ್ಪಕ ವಿಮಾನದಲ್ಲಿ ಜೊತೆಗೆ ನಟಿಸಿದ್ದರು. ಇದಲ್ಲದೇ ಚಿತ್ರದಲ್ಲಿ ಪೂರ್ಣಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಚಿತ್ರಕ್ಕೆ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.

ರಾಮ ಶಾಮ ಭಾಮಾ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಮೇಶ್ ಅವರು ಸುಂದರಾಂಗ ಜಾಣ (2016) ಚಿತ್ರವನ್ನು ಕೊನೆಯದಾಗಿ ನಿರ್ದೇಶನ ಮಾಡಿದ್ದರು. ಈಗ 100 ಚಿತ್ರದ ಮೂಲಕ ನಿರ್ದೇಶಕರಾಗಿ ತೆರೆಯ ಮೇಲೆ ಬಂದಿದ್ದು, ಪ್ರೇಕ್ಷಕರನ್ನು ಯಾವ ರೀತಿ ಹಿಡಿದಿಡಲಿದ್ದಾರೆ ಎನ್ನುವುದಕ್ಕೆ ನ. 19ಕ್ಕೆ ಉತ್ತರ ಸಿಗಲಿದೆ.
______

Be the first to comment

Leave a Reply

Your email address will not be published. Required fields are marked *

Translate »
error: Content is protected !!