ಹೊಸತನ ತುಂಬಿರೋ ಹೊಸ ಪ್ರತಿಭೆಗಳ ಟೀಸರ್ ಬಿಡುಗಡೆ

‘ಸೈಕೋ’ ಸಿನಿಮಾ ಖ್ಯಾತಿಯ ಅನಿತಾ ಭಟ್ ಹಾಗೂ ಯುವ ನಟ ಪ್ರಮೋದ್ ಬೋಪಣ್ಣ ಮುಖ್ಯ ಭೂಮಿಕೆಯಲ್ಲಿರುವ ಬಳೆಪೇಟೆ ಚಿತ್ರದ ಆಫಿಶಿಯಲ್ ಟೀಸರ್ ಬಿಡುಗಡೆ ಆಗಿದ್ದು, ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಈ ಟೀಸರ್ ನೋಡ್ತಾ ಇದ್ರೆ ಗ್ಯಾಂಗ್ ಸ್ಟಾರ್ ಸಿನಿಮಾ ಅನಿಸುತ್ತೆ‌. ಚಿತ್ರರಂಗದಲ್ಲಿ ಸಾಕಷ್ಟು ಸೈಕಲ್ ಹೊಡೆದು ಬಳೆಪೇಟೆ ಚಿತ್ರದ ಮೂಲಕ ಪ್ರಮೋದ್ ಬೋಪಣ್ಣ ಹೀರೋ ಆಗುತ್ತಿದ್ದಾರೆ.

ಅನಿತಾ ಭಟ್ ಈ ಚಿತ್ರದಲ್ಲಿ ಡಿ ಗ್ಲ್ಯಾಮರ್ ಪ್ರೇಯಸಿಯಾಗಿ ಪ್ರಮೋದ್​​ಗೆ ಜೋಡಿಯಾಗಿದ್ದಾರೆ‌. ಅನಿತಾ ಭಟ್ ಹಾಗೂ ಪ್ರಮೋದ್ ಅಲ್ಲದೆ ‘ಮಣಿ’ ಸಿನಿಮಾ ಖ್ಯಾತಿಯ ಮಯೂರ್ ಪಟೇಲ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಮೋದ್ ಬೋಪಣ್ಣ ಸ್ನೇಹಿತರಾಗಿ ಅಭಿಷೇಕ್ ಮಠದ, ಚೇತನ್, ಲೋಕೇಶ್ ರೇವಣ್ಣ, ಕಾರ್ತಿಕ್ ನಟಿಸಿದ್ದಾರೆ. ಉಮೇಶ ಬಣಕಾರ್, ಉಗ್ರಂ ಸಿನಿಮಾ ರವಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಲಾಕ್​​ಡೌನ್​ ಸಮಯದಲ್ಲಿ ಯುವ ನಿರ್ದೇಶಕ ರಿಷಿಕೇಶ್ ಕಥೆ, ಚಿತ್ರಕಥೆ ಬರೆದು, ಕ್ಯಾಮರಾ ವರ್ಕ್, ಜೊತೆಗೆ ನಿರ್ದೇಶನ ಮಾಡಿದ್ದಾರೆ. ಉತ್ತಮ್, ಲೋಹಿತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ವಿ.ಎಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಬನಾನ ಶಿವರಾಮ್ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್​​​​ನಲ್ಲಿರುವ ಬಳೆಪೇಟೆ ಸಿನಿಮಾ ಏಪ್ರಿಲ್ ತಿಂಗಳ ಹೊತ್ತಿಗೆ ರಿಲೀಸ್ ಆಗೋದಿಕ್ಕೆ ಸಜ್ಜಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!