ಚೌಕಿದಾರ್ ಪೃಥ್ವಿ ಅಂಬರ್

‘ಚೌಕಿದಾರ್’ ಚಿತ್ರದಲ್ಲಿ ರಗಡ್ ಗೆಟಪ್‌ನಲ್ಲಿ ಪೃಥ್ವಿ ಅಂಬರ್

ಕ್ಲಾಸ್ ಸಿನಿಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬರ್ ಮೊದಲ ಬಾರಿಗೆ ರಗಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಸ್ ಹಿಡಿಯುತ್ತಿದ್ದ ಪೃಥ್ವಿ ಕೈಗೆ ಲಾಂಗ್ ಕೊಟ್ಟು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಕ್ತಹರಿಸಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚೌಕಿದಾರ್ ಸಿನಿಮಾದ ಟೀಸರ್ ಅನಾವರಣಗೊಂಡಿದೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪೃಥ್ವಿ ಪ್ರತ್ಯಕ್ಷರಾಗಿದ್ದಾರೆ. ರಕ್ತಸಿಕ್ತ ಅವತಾರವೆತ್ತಿರುವ ಅವರ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದೆ.

ಟೀಸರ್ ನಲ್ಲಿ ಎಲ್ಲಾ ಪಾತ್ರಗಳನ್ನು ತೋರಿಸಿರುವ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ ನಲ್ಲಿ ಸುಧಾರಾಣಿ‌ ಖದರ್ ತೋರಿಸಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪೃಥ್ವಿ ತಂದೆ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಧರ್ಮ, ಹಿರಿಯ ನಟಿ ಶ್ವೇತಾ ತಾರಾ ಬಳಗದಲ್ಲಿದ್ದಾರೆ.

ಚೌಕಿದಾರ್ ಪೃಥ್ವಿ ಅಂಬರ್

ಪೃಥ್ವಿ ಅಂಬರ್ ಗೆ ಜೋಡಿಯಾಗಿ ಅಭಿನಯಿಸಿರುವ ಧನ್ಯ ರಾಮ್ ಕುಮಾರ್ ಡಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಟೀಸರ್ ನಲ್ಲಿ ಗಮನಸೆಳೆಯುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.

ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಮೇ ತಿಂಗಳಲ್ಲಿ ಚೌಕಿದಾರ್ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಟೀಸರ್ ನೋಡುತ್ತಿದ್ದರೇ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವುದೋ ಹೊಸ ಕಥೆಯನ್ನು ಹರವಿಡಲು ಹೊರಟಿರುವುದು ಗೊತ್ತಾಗುತ್ತಿದೆ.

ಚೌಕಿದಾರ್ ಪೃಥ್ವಿ ಅಂಬರ್

Be the first to comment

Leave a Reply

Your email address will not be published. Required fields are marked *

Translate »
error: Content is protected !!