ಚಿತ್ರ ಯಾಕೆ ನೋಡ್ಬೇಕು ಗೊತ್ತಾ?
ನಿರ್ದೇಶಕ/ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು
ಬಿಯಾಂಡ್ ರಿಂಗ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಠೆಯು ಇನ್ಸ್ಪೈರಿಂಗ್ ಯಂಗ್ ಟ್ಯಾಲೆಂಟ್ಸ್ ಎನ್ನುವ ಟ್ಯಾಗ್ ಲೈನ್‌ನೊಂದಿಗೆ ನವ ನಟ-ನಟಿಯರನ್ನು, ಹೊಸ ಜಾನರ್‌ನ ಚಿತ್ರಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ.
ಚಿತ್ರದ ಮುಖ್ಯ ಪಾತ್ರಗಳಲ್ಲಿ ರಾಸಿಕ್ ಕುಮಾರ್, ಭುವನ್ ನಾರಾಯಣ್ ಹಾಗೂ ಆದಿತಿ ಅಭಿನಯಿಸಿದ್ದಾರೆ. ಭುವನ್ ನಾರಾಯಣ್‌ರಿಗೆ ಇದು ಚೊಚ್ಚಲ ಚಿತ್ರವಾದರೆ, ರಾಸಿಕ್ ಕುಮಾರ್‌ಗೆ ಮೈನ್ ಲೀಡ್ ಆಗಿ ಮೊದಲ ಚಿತ್ರ, ತುಳುನಾಡಿನ ಚೆಲುವೆ ಕರ್ನಾಟಕದ ಬೆಡಗಿ ಆದಿತಿಯವರಿಗೆ ಕನ್ನಡದಲ್ಲಿ ಮೊದಲ ಚಿತ್ರ. ಆದರೆ ಈಗಾಗಲೇ ತಮಿಳಿನಲ್ಲಿ ನಾಯಕಿಯಾಗಿ ನಟಿಸಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚಿತ್ರದಲ್ಲಿ ಒಂದು ಕಾಗೆ ಮಹತ್ವ ಪಾತ್ರವಾಗಿ ಕಾಣಿಸಿಕೊಳ್ಳಲಿದೆ. ಉಳಿದಂತೆ ಸತ್ಯನಾಥ್, ಪವನ್ ಕುಮಾರ್, ವೀಣಾ ಸುಂದರ್, ಪ್ರಣಯ ಮೂರ್ತಿ, ಚಕ್ರವರ್ತಿ ದಾವಣಗೆರೆ, ಮಹದೇವ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರಾಗಿ ರಾಘವೇಂದ್ರ ತಾನೆ ಕಾರ್ಯನಿರ್ವಹಿಸಿದ್ದಾರೆ, ಒಂದು ಥೀಮ್ ಸಾಂಗ್ ಮತ್ತು ಬ್ಯಾಕ್‌ರೌಂಡ್ ಸಂಗೀತವನ್ನು ಆರ್.ಎಸ್. ಗಣೇಶ್ ನಾರಯಣ್ ನೀಡಿದ್ದಾರೆ. ಚಿತ್ರದಲ್ಲಿ ‘ಎಲ್ಲೋ ಮುಗಿಲು’ ಎಂಬ ಒಂದೇ ಒಂದು ಹಾಡಿದ್ದು, ಅದಕ್ಕೆ ಮೇಘನಾ ಧ್ವನಿಯಾಗಿದ್ದಾರೆ. ಚಿತ್ರದ ಛಾಯಾಗ್ರಹಣ ಕಾರ್ಯವನ್ನು ಛಾಯಾಗ್ರಾಹಕ ರುದ್ರಮುಣಿ ಬೆಳಗೆರೆ ಹಾಗೂ ಎಡಿಟಿಂಗ್ ಕೆಲಸವನ್ನು ಬಿ.ಎಸ್. ಕೆಂಪರಾಜು ಮಾಡಿದ್ದಾರೆ. ಚಂದನವನದಲ್ಲಿ ಬಹುನಿರೀಕ್ಷೆಯನ್ನು ಮೂಡಿಸಿರುವ ಈ ಚಿತ್ರದ ಬಗ್ಗೆ, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರೂ ಆಗಿರುವ ನಂದಳಿಕೆ ನಿತ್ಯಾನಂದ ಪ್ರಭು ಅವರು ತಮ್ಮ ಇಡೀ ಸಿನಿಮಾ ಜರ್ನಿಯನ್ನು ‘ಬಿ-ಸಿನಿಮಾಸ್’ ಜೊತೆ ಹಂಚಿಕೊಂಡಿದ್ದಾರೆ.
‘ನಾನು ಸಣ್ಣದರಲ್ಲೇ ಕಥೆ ಬರೆಯೋದು ನನ್ನ ಹವ್ಯಾಸವಾಗಿತ್ತು. ಕಾಲೆಜಿಗೆ ಬಂದಾಗ ಸಿನಿಮಾದ ಮೇಲೆ ಒಲವು ಹೆಚ್ಚಾಯ್ತು. ಮೆಕಾನಿಕಲ್ ಇಂಜಿನಿಯರ್ ಆಗಿದ್ದರಿಂದ ಅನಿವಾರ್ಯವಾಗಿ ಅದೇ ಫೀಲ್ಡ್ ನಲ್ಲಿ ತೊಡಗಿಕೊಳ್ಳಬೇಕಾಯಿತು. ಆದರೆ 2004ರ ವೇಳೆಗೆ ನನ್ನೊಳಗಿನ ಸಿನಿಮಾ ಪ್ರೇಮಿ ಮತ್ತೆ ಎದ್ದು ನಿಂತಿದ್ದ. ಅಲ್ಲಿಂದ ಮೆಕ್ಯಾನಿಕಲ್ ಜಾಬ್‌ಗೆ ಗುಡ್‌ಬಾಯ್ ಹೇಳಿ ಸಂಪೂರ್ಣವಾಗಿ ಸಿನಿಮಾದಲ್ಲೇ ತೊಡಗಿಸಿಕೊಂಡೆ. ಆದರೆ, ಸಿನಿಮಾ ಕ್ಷೇತ್ರದಲ್ಲಿ ಗುರಿತಿಸಿಕೊಳ್ಳುವುದು ಸುಲಭದ ಹಾದಿಯಲ್ಲ ಎಂಬ ಅರಿವು ನನಗಿತ್ತು.
ಅದಕ್ಕೇ ದಶಕಗಳ ಕಾಲ ಸಿನಿಮಾ ಕ್ಷೇತ್ರದ ಹಲವು ರಂಗಗಳಲ್ಲಿ ಪರಿಣಿತಿಯನ್ನು ಪಡದುಕೊಂಡೆ. ಫೋಟೋಗ್ರಫೀ ಮತ್ತು ವಿಡೀಯೋಗ್ರಫೀಯನ್ನು ಕಲಿತು ಅದನ್ನೆ ನನ್ನ ವೃತ್ತಿಯನ್ನಾಗಿಸಿಕೊಂಡು, ಎಡಿಟಿಂಗ್ ಅನ್ನು ಕೂಡ ಕಲಿತೆ. ಎಡಿಟಿಂಗ್ ಕಲಿಯುವುದು ಮಾತ್ರವಲ್ಲದೇ ಹಲವು ವಿಧ್ಯಾರ್ಥಿಗಳಿಗೆ ಎಡಿಟಿಂಗ್ ಅನ್ನು ಕಲಿಸಿದೆ. ಚಿತ್ರರಂಗದಲ್ಲಿ ನಾನು ಬರೆದ ಕಥೆಗಳನ್ನು ಓದಿದ ಸ್ನೇಹಿತರು ನಾನು ಒಂದು ಚಿತ್ರ ನಿರ್ದೇಶಿಸಲು ಪ್ರೇರೆಪಿಸಿದರು. ನಾನು ಈಗಾಗಲೇ ಸಿನಿಮಾಕ್ಕಾಗಿ ಬರೆದಿರುವ ಸುಮಾರು ಎಂಭತ್ತು ಕಥೆಗಳಲ್ಲಿ ಮೊದಲಿಗೆ ‘ಐದು ಅಡಿ ಏಳು ಅಂಗುಲ’ ಅನ್ನುವ ಕಥೆಯನ್ನು ಚಿತ್ರ ಮಾಡುವುದಾಗಿ ತಿರ್ಮಾನಿಸಿದೆ. ಆದರೆ ನಿರ್ಮಾಪಕರು ಯಾರು ಸಿಗದೇ ಹೋದ ಕಾರಣ, ನನ್ನ ಹದಿನಾರು ವರ್ಷದ ಸಿನಿಮಾ ಜರ್ನಿಯ ಅನುಭವದ ಧೈರ್ಯದಲ್ಲಿ ನಾನೇ ನಿರ್ಮಾಪಕನೂ ಆದೆ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಜಾನರ್‌ನ ಚಿತ್ರವಾಗಿದ್ದರಿಂದ ಹೊಸಬರನ್ನೇ ಲೀಡ್ ರೋಲ್‌ಗಳಿಗೆ ಆರಿಸಿಕೊಂಡು. ಈಗಾಗಲೇ ಹೆಸರು ವಾಸಿಯಾಗಿರುವ ಹಿರಿಯ ನಟರಲ್ಲಿ ಪ್ರಮುಖ ಪಾತ್ರವನ್ನು ಮಾಡಿಸಿದೆ. ಇನ್ನೂ, ಸಿನಿಮಾದಲ್ಲಿ ಕಾಗೆಯ ಪಾತ್ರ ಪಾತ್ರ ಪ್ರಾಮುಖ್ಯವಾದುದು. ಈ ಪಾತ್ರ ಸೃಷ್ಠಿಗೆ ಕಾರಣ ನಾನು ಬಾಲ್ಯದಲ್ಲಿ ಓದಿದ್ದ ‘ಕಾಗೆ ಮತ್ತು ಊಜಿ’ ಕಥೆ. ಕಂಪ್ಯೂಟರ್ ಗ್ರಾಫಿಕ್ಸ್ ಮಾಡದೆಯೇ ನೈಜ ಕಾಗೆಯನ್ನು ಒಂದು ವಾರಗಳ ಕಾಲ ಚಿತ್ರಸಲಾಗಿದೆ.
ಚಿತ್ರದ ಚಿತ್ರಕಥೆಯನ್ನು ಇವತ್ತಿನ ಯುವ ಜನತೆಯನ್ನು ಆಧಾರವಾಗಿಟ್ಟುಕೊಂಡು ಹಣೆಯಲಾಗಿದ್ದು, ಚಿತ್ರ ಒಂದು ಘಂಟೆ ಐವತ್ತು ನಿಮಿಷದ ಕಾಲವಾಧಿಯನ್ನು ಹೊಂದಿದೆ. ನಮ್ಮ ಸುತ್ತಮುತ್ತಲೇ ನಾವು ನೊಡ್ತಾ ಇದೀವಿ, ಫ್ರಾಂಕ್ಸ್-ಟಿಕ್‌ಟಾಕ್ ಅಂತಲ್ಲಾ ಯುವಜನತೆ ಪ್ರಾಣ ಕಳ್ಕೋತಾ ಇದ್ದಾರೆ. ಈ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ಚಿತ್ರ ಸೆನ್ಸಾರ್ ಆಗಿ ಯು/ಎ ಸರ್ಟಿಫಿಕೆಟ್ ಸಿಕ್ಕದೆ. ಮರ್ಡರ್ ಮಿಸ್ಟರಿ ಆಗಿರೋದ್ರಿಂದ ಸ್ವಲ್ಪ ಬ್ಲಡ್ ಶೆಡ್ ತೋರೊಸಬೇಕಾದ ಅನಿವಾರ್ಯತೆ ಉಂಟಾಯ್ತು ಅಷ್ಟೇ. ಒಂಚೂರೂ ವಲ್ಗ್ಯಾರಿಟಿ ಇಲ್ಲದ.. ಫ್ಯಾಮಿಲಿ ಸಮೇತ ಕೂತು ನೋಡಬಾಗುದಾದ ಮತು ಮನೋರಂಜನೆಯ ಜೊತೆಗೆ ನೋಡುಗನ ಯೋಚನೆಯನು ಒರೆಗೆ ಹಚ್ಚುವ ಕೆಲಸವನ್ನು ‘5 ಅಡಿ 7 ಅಂಗುಲ’ ಚಿತ್ರ ಮಾಡುತ್ತದೆ ಅನ್ನುವುದು ನನ್ನ ಆಶಯ.
ಸಿನಿಮಾದ ಕಥೆ-ಚಿತ್ರಕಥೆ ಉತ್ತಮವಾಗಿದ್ದು, ಚಿತ್ರದಲ್ಲಿನ ಅನೇಕ ತಿರುವುಗಳು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ. ಕಥೆಯಲ್ಲಿ ಬೇಡವಾದದ್ದನ್ನು ಎಲ್ಲಿಯೂ ತುರುಕಿಲ್ಲ. ಚಿತ್ರಕ್ಕೆ ಏನು ಬೇಕೋ ಅದನ್ನು ಮಾತ್ರ ಅಳವಡಿಸಲಾಗಿದೆ. ನಾನು ಒಬ್ಬ ಪ್ರೇಕ್ಷಕನಾಗಿ ಯೋಚಿಸಿ, ಪ್ರೇಕ್ಷಕ ಏನನ್ನು ಬಯಸುತ್ತಾನೆ ಎಂಬುದನ್ನು ರಿಸರ್ಚ್ ಮಾಡಿ, ಒಂದು ಸಸ್ಪೆಸ್ ತ್ರಿಲ್ಲರ್ ಜಾನರ್‌ನಲ್ಲಿ, ಕಥೆಗೆ ಸಂಬಂಧ ಪಟ್ಟದ್ದನ್ನು ಮಾತ್ರ ಸೇರಿಸಿ, ಎಲ್ಲಿಯೂ ಹೆಚ್ಚಿನ ಪಾತ್ರಧಾರಿಗಳನ್ನು ಸೇರಿಸದೇ, ಪ್ರತಿ 5-10 ನಿಮಿಷಕ್ಕೊಂದರಂತೆ ಕಥೆಯಲ್ಲಿ ತಿರುವುಗಳನ್ನಿಟ್ಟು, ಚಿತ್ರಕಥೆಯಲ್ಲೊಬ್ಬರಾಗುವಂತೆ ಸಿನಿಮಾ ಮಾಡಿದ್ದೇವೆ. ಚಿತ್ರತಂಡ ತುಂಬ ಚೆನ್ನಾಗಿ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಒಂದು ಕ್ವಾಲಿಟಿ ಸಿನಿಮಾ ಹೊರತಂದಿದ್ದೇವೆ. ಆದಕಾರಣ ಪ್ರೇಕ್ಷಕ ನಮ್ಮ ಸಿನಿಮಾ ನೋಡಿ ನಮ್ಮನ್ನು ಹಾರೈಸಬೇಕು’’
Pingback: DevOps services and solutions