ಸಿನಿಮಾ ವಿಮರ್ಶೆ : ಯಾರಿಗೆ ಯಾರುಂಟು

‘ಯಾರಿಗೆ ಯಾರುಂಟು’ ಚಿತ್ರ ವಿಮರ್ಶೆ (ರೇಟಿಂಗ್ : 3/5) 

ತಾರಾಗಣಪ್ರಶಾಂತ್ಕೃತ್ತಿಕಾ ರವೀಂದ್ರ ಮೊದಲಾದವರು.

ನಿರ್ದೇಶಕಕಿರಣ್ ಗೋವಿ

ನಿರ್ಮಾಪಕಹೆಚ್ ಸಿ ರಘುನಾಥ

ಪ್ರೀತಿಯ ಹುಡುಕಾಟದಲ್ಲಿರುವ ಓರ್ವ ಆಸ್ಪತ್ರೆಯ ವಾರ್ಡ್ ಬಾಯ್ ನ ಬದುಕಲ್ಲಿ ಮೂರು ಮಂದಿ ಚೆಲುವೆಯರು ಬಂದು ಹೋಗುವ ಕತೆ ಮತ್ತು ಕೊನೆಯಲ್ಲಿ ಹುಡುಗನ ಬದುಕಿನ ಕತೆ ಇವೆರಡನ್ನು ಸೇರಿಸಿ‌ ಮಾಡಿರುವಚಿತ್ರವೇ ಯಾರಿಗೆ ಯಾರುಂಟು.ಅವನು ಆಸ್ಪತ್ರೆಯ ವಾರ್ಡ್ ಬಾಯ್. ಆತನ ಹೆಸರು ಚಿರಂಜೀವಿ. ಸಹೋದ್ಯೋಗಿಗಳು, ವೈದ್ಯರು ಮತ್ತು ಅಲ್ಲಿನ ರೋಗಿಗಳಿಗೆಲ್ಲ ಚಿರು ಎನ್ನುವ ಆತ್ಮೀಯ. ಅತ ಬುದ್ಧಿವಂತನೇ. ಆದರೆ ಯುವತಿಯರ ವಿಷಯಕ್ಕೆಬಂದಾಗ ಮಾತ್ರ ವಿಪರೀತ ಭಾವುಕ.

ಮೊದಲು ಅಂಜಲಿ ಎನ್ನುವ ಹುಡುಗಿಯನ್ನು ಕಂಡು ಇಷ್ಟಪಡುತ್ತಾನೆ. ಆದರೆ ಆಕೆಯ ಲೆವೆಲ್ ಬೇರೆ ಎಂದು ಅರಿತು ತಾನಾಗಿಯೇ ದೂರಾಗುತ್ತಾನೆ. ಇನ್ನೊಬ್ಬಳು ಬಡವರ ಮನೆಯ ಚಂದದ ಹುಡುಗಿ ರಶ್ಮಿಯನ್ನುನೋಡುತ್ತಾನೆ. ಆಕೆ ಅಂಧೆಯಾಗಿರುವುದಾಗಿ ಅರಿತರೂ ಇಷ್ಟಪಡುತ್ತಾನೆ. ಆದರೆ ಆಕೆ ಅದಾಗಲೇ ಒಬ್ಬನ ಜೊತೆ ಪ್ರೇಮದಲ್ಲಿರುವುದು ತಿಳಿಯುತ್ತದೆ. ಆಕೆ ಸಿಗದೇ ಹೋದಾಗ ನೋವಲ್ಲಿರುವಾತನಿಗೆ ಮತ್ತೊಂದು ಪ್ರೀತಿಮೂಡುತ್ತದೆ. ಈ ಬಾರಿ ಚಿರು ಇರುವ ಆಸ್ಪತ್ರೆಗೆ ಬರುವ ಆತನ ಅಭಿಮಾನದ ನಟಿಯ ಮೇಲೆ ಪ್ರೀತಿ ಮೂಡಿರುತ್ತದೆ. ಆಕೆಯೂ ಚಿರು ಜೊತೆ ಆತ್ಮೀಯವಾಗಿ ಬೆರೆಯುತ್ತಾಳೆ. ಮುಂದೇನಾಗುತ್ತದೆ ಎನ್ನುವುದೇ  ಚಿತ್ರದಕತೆ.

ಮೇಕಿಂಗ್ ನಲ್ಲಿ ನಿರ್ದೇಶಕ ಕಿರಣ್ ಗೋವಿ ಸೆ ಎಂದಿನಂತೆ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಬಣ್ಣಗಳಿಂದ ತುಂಬಿದ ಪ್ರಕೃತಿಯ ರಮಣೀಯವಾದ ಪ್ರತಿ ಫ್ರೇಮ್ ಗಳು ಕೂಡಾ ಪ್ರೀತಿಯನ್ನು ಮೂಡಿಸುವಂತಿದೆ. ಚಿರುವಿನ ಪಾತ್ರದಲ್ಲಿ ಪ್ರಶಾಂತ್ ನಟನೆ ಆಕರ್ಷಕ. ಮುಗ್ದನ ಇಮೇಜ್ ನಲ್ಲಿ ಒರಟ ಪ್ರಶಾಂತ್ ನನ್ನು ಕಲ್ಪಿಸಲು ಕಷ್ಟವಾದರೂ ಚಿತ್ರ ಮುಂದುವರಿದ ಹಾಗೆ ಇಷ್ಟವಾಗುತ್ತಾ ಹೋಗುತ್ತಾರೆ. ಎಲ್ಲಾ ನಾಯಕಿಯರು ಚಿತ್ರಕ್ಕೆಕಳೆ ನೀಡಿದ್ದಾರೆ. ಕೃತ್ತಿಕಾ ರವೀಂದ್ರ ಅಮೋಘವಾಗಿ ಅಭಿನಯಿಸಿದ್ದಾರೆ. ಪ್ರೇಮಿಗಳು ಮೆಚ್ಚುವಂತಹ ಚಿತ್ರ ಯಾರಿಗೆ ಯಾರುಂಟು.

 

This Article Has 1 Comment
  1. Pingback: 뉴토끼

Leave a Reply

Your email address will not be published. Required fields are marked *

Translate »
error: Content is protected !!