ವನ್ಯಜೀವಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊರೋನಾ ಸಂದರ್ಭದಲ್ಲಿ ಆಹಾರ ಕೊರತೆ ಎದುರಿಸುತ್ತಿರುವ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿಸಂತತಿ ಉಳಿಸಿ ಎಂದು ಕರೆ ಕೊಟ್ಟಿದ್ದರು.
ಈಗ ಉತ್ತರ ಕರ್ನಾಟಕದ ಯುವಪ್ರತಿಭೆ ಅಭಯ್‌ವೀರ್ ಅವರು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ನಿಸರ್ಗ ಧಾಮದಿಂದ ಅರ್ಜುನ ಎಂಬ ಚಿರತೆಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯುವ ಮೂಲಕ ದರ್ಶನ್ ರನ್ನು ಅನುಸರಿಸಿದ್ದಾರೆ.
ಕೊರೋನಾ ಲಾಕ್‌ಡೌನ್ ಶುರುವಾದಾಗಿನಿಂದಲೂ ಅಭಯ್ ವೀರ್ ಸಾಕಷ್ಟು ಬಡ ಜನರಿಗೆ, ಚಿತ್ರೋದ್ಯಮದ ಕಾರ್ಮಿಕರಿಗೆ ಆಹಾರ ಧಾನ್ಯ, ಫುಡ್ ಕಿಟ್ ವಿತರಿಸುವ ಮೂಲಕ ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿದ್ದರು.
ಈಗ ವನ್ಯಜೀವಿಗಳಿಗೂ ಆಹಾರದಾತನಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೊನ್ನೆ ಜೂ ಅಥಾರಿಟಿ ಅಭಯ್ ವೀರ್ ಅವರಿಗೆ ಅಡಾಪ್ಷನ್ ಸರ್ಟಿಫಿಕೇಟ್ ನೀಡಿ ಪ್ರಶಂಸಿಸಿದೆ.
ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿರುವ ಅಭಯ್‌ವೀರ ಅವರು ಇತ್ತೀಚೆಗೆ ಪ್ರಾರಂಭವಾದ ಜಾನಿ ವಾಕರ್ ಎಂಬ ಚಿತ್ರದಲ್ಲಿ ಲೀಡ್ ರೋಲ್ ಮಾಡುತ್ತಿದ್ದಾರೆ.
Be the first to comment