‘ಚೌಕಿದಾರ್’ ಚಿತ್ರತಂಡಕ್ಕೆ ಎಸ್ ಚಿನ್ನ ಸೇರ್ಪಡೆ

ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಚಿತ್ರತಂಡಕ್ಕೆ ತೆಲುಗು ರೀ-ರೆಕಾರ್ಡಿಂಗ್ ಸ್ಪೆಷಲಿಸ್ಟ್‌ ಎಸ್ ಚಿನ್ನ  ಸೇರಿಕೊಂಡಿದ್ದಾರೆ.

ಪ್ರಭಾಸ್ ಅಭಿನಯದ ರೆಬೆಲ್, ನಾಗಾರ್ಜುನ ಅವರ ಡಾನ್, ರವಿತೇಜ ಅವರ ಬೆಂಗಾಲ್ ಟೈಗರ್ ಮತ್ತು ಬಾಲಕೃಷ್ಣ ಅವರ ಸಿಂಹ ಮುಂತಾದ ಚಿತ್ರಗಳಲ್ಲಿ ಎಸ್ ಚಿನ್ನ ಕೆಲಸ ಮಾಡಿದ್ದಾರೆ. ಅವರು ನಿಖಿಲ್ ಕುಮಾರಸ್ವಾಮಿ ಅವರ ಚೊಚ್ಚಲ ಜಾಗ್ವಾರ್ ಚಿತ್ರದಲ್ಲೂ ಕೆಲಸ ಮಾಡಿದ್ದರು. ಹಲವು ವರ್ಷಗಳ ಬಳಿಕ   ಚಿನ್ನ ಚೌಕಿದಾರ್ ಮೂಲಕ ಕನ್ನಡಕ್ಕೆ ಮರಳಿದ್ದಾರೆ.

ರಥಾವರ ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ‘ಚೌಕಿದಾರ್’ ಚಿತ್ರದ ಜೊತೆ ಮತ್ತೆ ಬರುತ್ತಿದ್ದಾರೆ. ಚೌಕಿದಾರ್ ಬಹುಭಾಷೆಗಳಲ್ಲಿ ತಯಾರಾಗುತ್ತಿದೆ. ‘ಚೌಕಿದಾರ್’ ಶೀಘ್ರದಲ್ಲೇ ತೆರೆಗೆ ಬರಲಿದೆ. ತಂಡ  ಸದ್ಯ ರೀ-ರೆಕಾರ್ಡಿಂಗ್ ಕೆಲಸದಲ್ಲಿ ನಿರತವಾಗಿದೆ.

‘ಚೌಕಿದಾರ್’ ಚಿತ್ರದಲ್ಲಿ ಪೃಥ್ವಿ ಅಂಬಾರ್, ಧನ್ಯ ರಾಮ್‌ಕುಮಾರ್,  ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ನಟಿಸಿರುವ ಶ್ವೇತಾ, ಸಾಯಿ ಕುಮಾರ್ ಮತ್ತು ಸುಧಾ ರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸಿದ್ದು, ವಿದ್ಯಾದೇವಿ ಸಹ ನಿರ್ಮಾಪಕಿಯಾಗಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಾಂಚನಹಳ್ಳಿ  ಛಾಯಾಗ್ರಹಣವಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!