ಎ.ಪಿ ಅರ್ಜುನ್ ಸಿನಿಮಾಗೆ ಚಿಕ್ಕಣ್ಣ ಹೀರೋ!

ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್  ಅವರ ನಿರ್ದೇಶನದ ಸಿನಿಮಾದಲ್ಲಿ ಚಿಕ್ಕಣ್ಣ ನಟಿಸೋದು ಕನ್ಫರ್ಮ್ ಆಗಿದೆ.

ಅಧಿಕೃತ ಮೂಲಗಳ ಮಾಹಿತಿ ಪ್ರಕಾರ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಆಗುತ್ತಿದೆ. ಚಿಕ್ಕಣ್ಣಗೆ ಸಿನಿಮಾದಲ್ಲಿ ಯಾರು ಹೀರೋಯಿನ್ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಚಿಕ್ಕಣ್ಣ ಸ್ಕ್ರಿಪ್ಟ್ ಓಕೆ ಮಾಡಿ 2ನೇ ಬಾರಿಗೆ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

10 ವರ್ಷಗಳ ಹಿಂದೆ ಬಂದಿದ್ದ ‘ಅಧ್ಯಕ್ಷ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಉಪಾಧ್ಯಕ್ಷ ಆಗಿ ಚಿಕ್ಕಣ್ಣ ನಟಿಸಿದ್ದರು. ಅದೇ ಕಥೆಯನ್ನು ಬೇರೆಯದ್ದೇ ರೂಪದಲ್ಲಿ ‘ಉಪಾಧ್ಯಕ್ಷ’ನ ಪಾತ್ರವನ್ನೇ ಲೀಡ್ ಮಾಡಿ ಉಪಾಧ್ಯಕ್ಷ’ ಸಿನಿಮಾದಲ್ಲಿ ಕಥೆ ಹೇಳಲಾಗಿತ್ತು. ಜನವರಿ 26ಕ್ಕೆ ಸಿನಿಮಾ ತೆರೆಗೆ ಬಂದಿತ್ತು.

‘ಉಪಾಧ್ಯಕ್ಷ’ ಚಿತ್ರದಲ್ಲಿ ಕಿರುತೆರೆ ನಟಿ ಮಲೈಕಾ ನಾಯಕಿಯಾಗಿ ಮಿಂಚಿದ್ದರು. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಚಿತ್ರದಲ್ಲಿ ಚಿಕ್ಕಣ್ಣ  ಕಾಮಿಡಿ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿ ರಂಜಿಸಿದ್ದರು. ಆರ್ಮುಗ ರವಿಶಂಕರ್, ಸಾಧು ಕೋಕಿಲ, ವೀಣಾ ಸುಂದರ್  ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ವರ್ಷದ ಮೊದಲ ಹಿಟ್ ಸಿನಿಮಾ ‘ಉಪಾಧ್ಯಕ್ಷ’ ಎನಿಸಿಕೊಂಡಿತ್ತು.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!