ಚಿ.ತು ಸಂಘ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು. ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿಯವರು ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಚಿತ್ರದ ನಿರ್ಮಾಪಕರಾದ ಎನ್.ಜಿ.ಶಿವಣ್ಣ ರ ಬಗ್ಗೆ ಮಾತನಾಡುತ್ತಾ , ಇವತ್ತು ಯಶಸ್ಸು ಕಾಣುವ ಸಿನಿಮಾಗಳು ತುಂಬಾ ಕಮ್ಮಿ. ಆದರೂ ಚಿತ್ರ ನಿರ್ಮಾಣ ಮಾಡುವವರಿಗೆ ಕೊರತೆ ಇಲ್ಲ. ಯಾವ ನಂಬಿಕೆಯ ಮೇಲೆ ಇಷ್ಟೊಂದು ದುಡ್ಡು ಸುರಿದಿದ್ದಾರೆ ಎಂದು ಗೊತ್ತಿಲ್ಲ. ಆದರೂ ಸಿನಿಮಾ ಗೆಲ್ಲಲಿ’ ಎಂದರು.
ಡಬ್ಬಿಂಗ್ ಚಿತ್ರಗಳ ಹಾವಳಿ ಜಾಸ್ತಿಯಾಗಿದೆ ಇದಕ್ಕೆ ಕಡಿವಾಣ ಹಾಕಲು ನಾನು ಸಿದ್ಧನಿದ್ದೇನೆ ಎಂದಾಗ ಸಿನಿಮಾ ತಂಡದವರ ಕರಘೋಷ ಮುಗಿಲು ಮುಟ್ಟಿತು. ಜೈ ತುಳುನಾಡ್ ಸಿನಿಮಾ ವನ್ನು ನಿರ್ಮಿಸಿದ್ದ ನಿರ್ಮಾಪಕ ಎನ್.ಜಿ.ಶಿವಣ್ಣ ಇದೀಗ ಚಿಕ್ಕನಾಯಕನಹಳ್ಳಿ ಯ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಅಧ್ಯಕ್ಷ ಚಿತ್ರದಲ್ಲಿ ಚಿ.ತು.ಸಂಘ ಎಂಬ ಸಂಘಟನೆ ಯ ಬಗ್ಗೆ, ಅದರ ಪೂರ್ಣ ರೂಪ ‘ ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘ’ ಅದರ ಸಂಕ್ಷಿಪ್ತ ರೂಪವೇ ಈ ಸಿನಿಮಾದ ಹೆಸರು ಎಂದು ಈ ಚಿತ್ರದ ನಿರ್ದೇಶಕ ಮತ್ತು ನಾಯಕರಾದಂತಹ ಚೇತನ್ ಕುಮಾರ್ ಹೇಳಿದರು. ಚಿತ್ರ ಸೆನ್ಸಾರ್ ಗೆ ಹೋಗಿದೆ. ಸಿನಿಮಾಕ್ಕೆ ರವೀಶ್ ಸಂಗೀತ ನಿರ್ದೇಶಕ ರಾಗಿದ್ದು, ಸಾಹಿತ್ಯ ಅಪ್ಪು ವರ್ಧನ್ ಬರೆದಿದ್ದಾರೆ. ಒಟ್ಟಿಗೆ ಈ ಸಿನಿಮಾದಲ್ಲಿ 4 ಹಾಡುಗಳಿವೆ ಎಂದರು.
ಹಳ್ಳಿ ಹುಡುಗರು ಯಾವ ರೀತಿ ತರಲೆ ಮಾಡುತ್ತಾರೆ ಎಂದು ಚಿತ್ರದಲ್ಲಿ ಸ್ನೇಹಿತ ನಾಗಿ ಪಾತ್ರ ನಿರ್ವಹಿಸಿದ ಪೃಥ್ವಿ ಹೇಳಿದರು.ನಾಯಕಿಯ ಮಾವನಾಗಿ, ಕುಂಟನಾಗಿ ಹೀರೋಗೆ ವಿರೋಧಿಯಾಗಿ ಪಾತ್ರ ನಿರ್ವಹಿಸಿದ್ದೇನೆ ಎಂದು ಯುವ ನಟ ಗೌತಮ ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ರೂಪಿಕಾ ಚಿತ್ರದ ನಾಯಕಿಯಲ್ಲಿ ಪ್ರಶ್ನೋತ್ತರ ನಡೆಸಿ, ನಾಯಕಿಯ ಪಾತ್ರ ರಫ್ ಆಂಡ್ ಟಫ್ ಕ್ಯಾರೆಕ್ಟರ್ ಎಂದು ಹೇಳುವಂತೆ ಮಾಡಿದ್ದು ಶ್ಲಾಘನೀಯ ವಾಗಿತ್ತು. ನಾಯಕನಿಗೆ ಬೈಯೋದೆ ನನ್ನ ಕ್ಯಾರೆಕ್ಟರ್ ಎಂದರು ನಾಯಕಿ ನಟಿ ರೂಪಾ.ಪೋಷಕ ನಟಿಯರಾದ ರತ್ನ ಚಂದನಾ, ಬಬಿತಾ, ಚಿತ್ರದ ಸಹ ನಿರ್ಮಾಪಕಿ ಪಾರ್ವತಿ, ಸತೀಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರದ ಎರಡು ಹಾಡುಗಳು ಜೊತೆಗೆ ಟೀಸರ್ ಬಿಡುಗಡೆ ಮಾಡಲಾಯಿತು.
Pingback: คาสิโน