ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟಿಸಿರುವ ‘ಛಾವ’ ಸಿನಿಮಾ ಫೆ.14ಕ್ಕೆ ಬಿಡುಗಡೆ ಆಗುತ್ತಿದೆ.
ಛತ್ರಪತಿ ಶಂಬಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ವಿಕ್ಕಿ ಕೌಶಲ್ ಅವರು ಶಂಬಾಜಿ ಮಹಾರಾಜ್ ಪಾತ್ರವನ್ನು ನಿಭಾಹಿಸಿದ್ದಾರೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ದೊಡ್ಡ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರು ಸತತ ಗೆಲುವು ಕಂಡಿದ್ದಾರೆ. ಈಗ ಅವರು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.
ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಮತ್ತು ‘ಪುಷ್ಪ 2’ ಸಿನಿಮಾದಿಂದ ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಷ್ಟೋ ಹೀರೋಗಳಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ‘ಛಾವ’ ಸಿನಿಮಾದಲ್ಲಿ ಅವರ ಮ್ಯಾಜಿಕ್ ಮರುಕಳುಸುತ್ತಾ ಎಂಬುದು ಫೆಬ್ರವರಿ 14ರಂದು ಗೊತ್ತಾಗಲಿದೆ.
ರಶ್ಮಿಕಾ ‘ಛಾವಾ’ ಸಿನಿಮಾದ ಪ್ರಮೋಷನ್ನಲ್ಲಿ ಭಾಗವಹಿಸುವ ಸಂದರ್ಭಕ್ಕೆ ಕಾಲಿಗೆ ಪೆಟ್ಟಾಗಿದ್ದರೂ ವ್ಹೀಲ್ ಚೇರ್ನಲ್ಲಿ ಬಂದು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ರಶ್ಮಿಕಾ ಈಗ ಗುಣಮುಖರಾಗಿದ್ದಾರೆ.
—-
![](https://bcinemas.in/wp-content/uploads/2020/11/whatsapp.png)
Be the first to comment