Chef Chidambara Review : ಶೆಫ್ ಚಿದಂಬರನ ಹೋಟೆಲ್ ಕನಸು

ಚಿತ್ರ: ಶೆಫ್ ಚಿದಂಬರ

ನಿರ್ದೇಶನ: ಆನಂದ ರಾಜ್ ಎಂ
ನಿರ್ಮಾಣ: ರೂಪ ಡಿ ಎನ್
ತಾರಾಗಣ: ಅನಿರುದ್ಧ, ನಿಧಿ ಸುಬ್ಬಯ್ಯ, ರೆಚೆಲ್ ಡೇವಿಡ್, ಶರತ್ ಲೋಹಿತಾಶ್ವ, ಶಿವಮಣಿ ಇತರರು

ರೇಟಿಂಗ್: 3.5/5

ಶೆಫ್ ಆಗಿ ಕೆಲಸ ಮಾಡುವ ಚಿದಂಬರ ತನ್ನದೇ ಆದ ಹೋಟೆಲ್ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳ ಕಥೆ ಈ ವಾರ ತೆರೆಗೆ ಬಂದಿರುವ ‘ ಶೆಫ್ ಚಿದಂಬರ ‘ ಸಿನಿಮಾದ ಒನ್ ಲೈನ್ ಸ್ಟೋರಿ.

ಚಿತ್ರತಂಡ ಹೇಳಿರುವಂತೆ ಇದು ಡಾರ್ಕ್ ಕಾಮಿಡಿ ಜಾನರ್. ಇಲ್ಲಿ ಒಂದಷ್ಟು ಸಸ್ಪೆನ್ಸ್, ಮಿಸ್ಟರಿ ಕ್ರೈಂ ಜೊತೆಗೆ ಕಥೆಯನ್ನು ಹೇಳುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಶೆಫ್ ಚಿದಂಬರನಿಗೆ ತನ್ನದೇ ಆದ ಹೋಟೆಲ್ ಕಟ್ಟಿಕೊಳ್ಳುವ ಬಯಕೆ. ಅವನು ಅವಿನಾಶ್ ಶೆಟ್ಟಿ ಒಡೆತನದ ಹೋಟೆಲ್ ಸ್ವಂತ ಮಾಡಿಕೊಳ್ಳಲು ಹಣಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾನೆ. ಈ ಯತ್ನದಲ್ಲಿ ಒಂದಷ್ಟು ಕ್ರೈಂ ಗಳು ನಡೆಯುತ್ತವೆ. ಇವೆಲ್ಲವನ್ನು ಚಿದಂಬರ ಮೆಟ್ಟಿನಿಂತು ಹೇಗೆ ಗೆದ್ದ ಎನ್ನುವುದಕ್ಕೆ ತೆರೆಯ ಮೇಲೆ ಚಿತ್ರವನ್ನು ನೋಡಬೇಕು.

ನಿರ್ದೇಶಕರು ಆರಿಸಿಕೊಂಡಿರುವ ಕಥೆ ಭಿನ್ನವಾಗಿದೆ. ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಯತ್ನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿರ್ದೇಶಕರು ತೆರೆಯ ಮೇಲೆ ಉತ್ತಮವಾಗಿ ತಂದಿದ್ದಾರೆ.

ಅನಿರುದ್ಧ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ಉತ್ತಮವಾಗಿ ನಟಿಸಿದ್ದಾರೆ. ಡಾನ್ ಪಾತ್ರದಲ್ಲಿ ನಟಿಸಿರುವ ಶಿವಮಣಿ, ಇನ್ಸ್ಪೆಕ್ಟರ್ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀಧರ್, ಕರಿಸುಬ್ಬು ಚಿತ್ರದ ಓಟಕ್ಕೆ ಪೂರಕವಾಗಿ ನಟಿಸಿದ್ದಾರೆ.

ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಛಾಯಾಗ್ರಾಹಕ ಉದಯಲೀಲಾ ಅವರು ಸುಂದರವಾಗಿ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ.

ಮನರಂಜನೆಯ ಚಿತ್ರವಾಗಿ ಶೆಫ್ ಚಿದಂಬರ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!