ಸಂಜನಾ ಗಲ್ರಾನಿಗೆ ವಂಚನೆ: ಸ್ನೇಹಿತನಿಗೆ ಜೈಲು ಶಿಕ್ಷೆ!

ನಟಿ ಸಂಜನಾ ಗಲ್ರಾನಿಗೆ ವಂಚಿಸಿದ  ಸ್ನೇಹಿತನಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ನ್ಯಾಯಾಲಯ ಆದೇಶ ಹೊರಡಿಸಿದೆ.

ಸ್ನೇಹಿತ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ ವಂಚಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 33ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಪಿಎಸ್ ಸಂತೋಷ್ ಕುಮಾರ್‌ ಅವರು ದಂಡ ಮತ್ತು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.

ದಂಡದ ಮೊತ್ತದಲ್ಲಿ 10 ಸಾವಿರ ರೂ. ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂ.ವನ್ನು ದೂರುದಾರೆ ಸಂಜನಾಗೆ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ನೀಡಬೇಕು. ನಿಗದಿತ ಸಮಯದ ಒಳಗಡೆ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ರಾಹುಲ್ ತೋನ್ಸೆ ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ” ಎಂದು ಆಮಿಷವೊಡ್ಡಿದ್ದ. ರಾಹುಲ್ ಮಾತು ನಂಬಿ ಸಂಜನಾ 45 ಲಕ್ಷ ರೂ. ನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದರು. ಆದರೆ, ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಸಿಕೊಡಲಿಲ್ಲ.  ಹಣಕ್ಕೆ ಒತ್ತಾಯ ಮಾಡಿದಾಗ ರಾಹುಲ್ 30 ಲಕ್ಷ ರೂ. ಮತ್ತು 15 ಲಕ್ಷ ರೂ. ಮೌಲ್ಯದ ಚೆಕ್‌ಗಳನ್ನು ನೀಡಿದ್ದ. 30 ಲಕ್ಷ ರೂ. ಚೆಕ್ ಬ್ಯಾಂಕ್‌ಗೆ ಜಮೆ ಮಾಡಿದಾಗ ರಾಹುಲ್ ಚೆಕ್ ತಡೆ ಹಿಡಿಯುವಂತೆ ಲೆಟರ್ ಕೊಟ್ಟಿದ್ದ. ಉಳಿದ 15 ಲಕ್ಷ ರೂ. ಮೌಲ್ಯದ ಚೆಕ್ ಜಮೆ ಮಾಡಿದಾಗ ಬೌನ್ಸ್ ಆಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಪ್ರಾಣ ಬೆದರಿಕೆ ಒಡ್ಡಿದ್ದ.

ಕೋರ್ಟ್‌ನಲ್ಲಿ  ದೂರು ದಾಖಲಿಸಿ ಕೋರ್ಟ್‌ ಆದೇಶದ ಮೇಲೆ ಇಂದಿರಾನಗರ ಠಾಣೆಯಲ್ಲಿ ರಾಹುಲ್ ತೋನ್ಸೆ, ಆತನ ತಂದೆ ರಾಮಕೃಷ್ಣ ಮತ್ತು ತಾಯಿ ರಾಜೇಶ್ವರಿ ವಿರುದ್ಧ ವಂಚನೆ , ಜೀವ ಬೆದರಿಕೆ , ಅವಾಚ್ಯ ಶಬ್ಧಗಳಿಂದ ನಿಂದನೆ ಇತರೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!