ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಛತ್ರಪತಿ ಸಂಭಾಜಿ ಮಹಾರಾಜ್ ಅವರ ಅಸಾಧಾರಣ, ಸ್ಪೂರ್ತಿದಾಯಕ ಕಥೆಯನ್ನು ಚಿತ್ರ ಒಳಗೊಂಡಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರ ಏಪ್ರಿಲ್ 11 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.
ಸಂಭಾಜಿ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ. ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಕ್ಷಯ್ ಖನ್ನಾ, ದಿವ್ಯಾ ದತ್ತ, ವಿನೀತ್ ಕುಮಾರ್ ಸಿಂಗ್, ಅಶುತೋಷ್ ರಾಣಾ, ನೀಲ್ ಭೂಪಾಲಂ ಮತ್ತು ಡಯಾನಾ ಪೆಂಟಿ ನಟಿಸಿದ್ದಾರೆ.
‘ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸುವುದು ಪದಗಳಿಗೆ ಮೀರಿದ ಗೌರವ.ನನ್ನ ವೃತ್ತಿಜೀವನದ ಅತ್ಯಂತ ತೃಪ್ತಿಕರ ಅನುಭವಗಳಲ್ಲಿ ಒಂದಾಗಿದೆ. ಅವರ ಧೈರ್ಯ ಮತ್ತು ಪರಂಪರೆ ಪ್ರಪಂಚದ ಪ್ರತಿಯೊಂದು ಮೂಲೆಯನ್ನೂ ತಲುಪಬೇಕಾದ ವಿಷಯವಾಗಿದೆ. ಅವರ ಕಥೆಯು ನೆಟ್‌ಫ್ಲಿಕ್ಸ್ ಮೂಲಕ ಭಾರತದ ಮೂಲೆ ಮೂಲೆಗೂ ತಲುಪಲು ಸಿದ್ಧವಾಗಿದೆ’ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ.
‘ಛಾವಾ’ ಚಿತ್ರದ ಹಾಡುಗಳಿಗೆ ಇರ್ಷಾದ್ ಕಾಮಿಲ್ ಸಾಹಿತ್ಯ ಬರೆದಿದ್ದು, ಎಆರ್ ರೆಹಮಾನ್ ಧ್ವನಿ ನೀಡಿದ್ದಾರೆ.
—-

Be the first to comment