ಡಿ-ಗ್ಯಾಂಗ್: ಸೋಮವಾರ ದೋಷಾರೋಪ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ದೋಷಾರೋಪ ಸಲ್ಲಿಕೆಗೆ ನ್ಯಾಯಾಲಯ ನವೆಂಬರ್ 3ಕ್ಕೆ ದಿನಾಂಕ ನಿಗದಿ ಪಡಿಸಿದೆ.

ನ್ಯಾಯಾಲಯ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ  ಕಡ್ಡಾಯವಾಗಿ ಹಾಜರಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ. ಅಲ್ಲದೆ ಒಂದು ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ಹೋದ ಪಕ್ಷದಲ್ಲಿ ಬಂಧನದ ಎಚ್ಚರಿಕೆಯನ್ನು ನ್ಯಾಯಾಧೀಶರು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್‌ ಕಂಬಿಗಳ ಹಿಂದೆ  ಜೀವನ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ನಂತರ ಆಗಸ್ಟ್ 14ರಂದು ದರ್ಶನ್ ಜೈಲು ಸೇರಿದ್ದರು. ಆಗ ನ್ಯಾಯಾಧೀಶರು ಆರೋಪಿಗೆ ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಅದರ ನಂತರದಿಂದ ದರ್ಶನ್ ಒಂದೇ ಕೋಣೆಯಲ್ಲಿ ಬಂಧಿಯಾಗಿದ್ದರು.  ಹಾಸಿಗೆ, ದಿಂಬು ಸೌಲಭ್ಯ ಇಲ್ಲದೆ,  ಸೂರ್ಯನ ಬೆಳಕನ್ನೂ ಕಾಣದೆ ದರ್ಶನ್ ಕತ್ತಲೆಯ ಜೀವನ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ಟೆಕ್ನಿಕಲ್ ಸಾಕ್ಷಿ ಮೇಲೆ ದರ್ಶನ್ ಭವಿಷ್ಯ ನಿಂತಿದೆ. ಪೊಲೀಸರು ಸಂಗ್ರಹಿಸಿರುವ ಟೆಕ್ನಿಕಲ್ ಎವಿಡೆನ್ಸ್ (ಮೊಬೈಲ್ ಡೇಟಾ, ಸಿಸಿಟಿವಿ ಮುಂತಾದವು)  ದರ್ಶನ್‌ಗೆ ದೊಡ್ಡ ಸವಾಲಾಗಲಿದೆ ಎನ್ನಲಾಗಿದೆ. ಇದೇ  ಅವರ ಭವಿಷ್ಯವನ್ನು ನಿರ್ಧರಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!