ಅವಕಾಶವಿಲ್ಲದೇ ಗಾರೆ ಕೆಲಸಕ್ಕಿಳಿದ ಹಾಸ್ಯನಟ

ಹಾಸ್ಯ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಕನ್ನಡದ ಖ್ಯಾತ ಹಾಸ್ಯನಟ ಚಂದ್ರಪ್ರಭಾ ಅವಕಾಶವಿಲ್ಲದೇ ಗಾರೆ ಕೆಲಸಕ್ಕಿಳಿದ್ದಾರೆ.

ಕಲರ್ಸ್‌ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ,  ಮಜಾಭಾರತ ಕಾರ್ಯಕ್ರಮಗಳಲ್ಲಿ ಚಂದ್ರಪ್ರಭಾ ಮಿಂಚಿದ್ದರು. ಚಂದ್ರಪ್ರಭಾ ಅವರಿಗೆ ಆರಂಭದಲ್ಲಿ ಒಳ್ಳೆಯ ವೇದಿಕೆ ಸಿಕ್ಕರೂ ದಿನ ಕಳೆದಂತೆ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಗಾರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಂದ್ರಪ್ರಭಾ ಕಿರುತೆರೆಗೂ ಬರುವ ಮೊದಲೇ ಗಾರೆ ಕೆಲಸ ಮಾಡುತ್ತಿದ್ದರು. ಅದನ್ನೇ ತಮ್ಮ ವೃತ್ತಿಯಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡಿದ್ದರು. ಇತ್ತೀಚೆಗೆ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದ್ದ ಅವರೀಗ ತಮ್ಮ ಹಳೆಯ ಕಸುಬಿಗೆ ಮರಳಿದ್ದಾರೆ.

ಚಂದ್ರಪ್ರಭಾ  ಪ್ಲಾಸ್ಟಿಂಗ್‌ ಮಾಡುತ್ತಿರುವ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಗುತ್ತಲೇ ಗಾರೆ ಕೆಲಸ ಮಾಡುತ್ತಿದ್ದಾರೆ.

‘ನಾನು ಮೊದಲು ಗಾರೆ ಕೆಲಸ ಮಾಡುತ್ತಿದ್ದೆ. ಆ ನಂತರ ಸಿನಿಮಾಗಳಿಗೆ ಬಂದಿದ್ದು. ಈಗ ಮತ್ತೆ ಎರಡು ತಿಂಗಳಿನಿಂದ ಗಾರೆ ಕೆಲಸ ಮಾಡುತ್ತಿದ್ದೇನೆ. ಗಾರೆ ಕೆಲಸ ಮಾಡಿ 17 ವರ್ಷಗಳಾಗಿತ್ತು.  ಇಲ್ಲಿವರೆಗೆ ಯಾವುದೇ ಸೀರಿಯಲ್‌ ಅಥವಾ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ. 10 ವರ್ಷಗಳಲ್ಲಿ ಸುಮಾರು 80 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈ ವರ್ಷ ಒಂದೂ ಸಿನಿಮಾ, ಸೀರಿಯಲ್‌ ಅವಕಾಶ ಸಿಗಲಿಲ್ಲ’ ಎಂದು  ಚಂದ್ರಪ್ರಭ ಹೇಳಿದ್ದಾರೆ.

‘ಟಿವಿಯಲ್ಲಿ ಮಿಂಚುತ್ತಿದ್ದವ ಈಗ  ಗಾರೆ ಕೆಲಸ ಮಾಡ್ತೀಯ ಅಂತ ಎಲ್ಲರೂ ಕೇಳ್ತಾರೆ. ಆದರೆ ನಾನು ಮೊದಲು ಊಟ ಮಾಡುತ್ತಿದ್ದದ್ದೇ ಈ ಕೆಲಸದಿಂದ. ನಮ್ಮ ತಂದೆ ನನಗೆ ಮೊದಲು ಕಲಿಸಿ ಕೊಟ್ಟಿದ್ದೇ ಗಾರೆ ಕೆಲಸ.  ನಾನು ಬೆಂಗಳೂರಿಗೆ ಬಂದು ಹತ್ತು ವರ್ಷ ಆಗಿರಬಹುದು. ಈಗ ಮದುವೆ ಕೂಡ ಆಗಿದೆ. ಅವಕಾಶಗಳಿಲ್ಲ. ದುಡಿಮೆಗೆ ಇದು ಅನಿವಾರ್ಯ’ ಎಂದು ಚಂದ್ರಪ್ರಭಾ ಬೇಸರ ಹೊರಹಾಕಿದ್ದಾರೆ.‌

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!