ಕನ್ನಡ ಸಿನಿಮಾ ಪತ್ರಕರ್ತರ ಸಮೂಹದಿಂದ ಆರಂಭವಾಗಲಿರುವ ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ಗೆ ನಾಳೆ ಚಾಲನೆ ದೊರೆಯಲಿದೆ.ಹ್ಯಾಟ್ರಿಕ್ ಹೀರೋ, ಕಲಾವಿದರ ಸಂಘದ ಕಾರ್ಯದರ್ಶಿ ಶಿವರಾಜ್ಕುಮಾರ್ ಅಕಾಡೆಮಿ ಉದ್ಘಾಟಿಸಲಿದ್ದಾರೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ವಿ. ನಾಗೇಂದ್ರ ಪ್ರಸಾದ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಹಲವು ಸದುದ್ದೇಶಗಳನ್ನು ಒಳಗೊಂಡಿದೆ. ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಆನ್ಲೈನ್ ಮಾಧ್ಯಮದ ಹಿರಿಯರು ಹಾಗೂ ಕಿರಿಯರು ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಸದಸ್ಯರಾಗಿರುತ್ತಾರೆ. ಈ ಅಕಾಡೆಮಿಗೆ ಕೇಂದ್ರ ಸರ್ಕಾರದಿಂದ ಈಗಾಗಲೇ ನಾನ್-ಪ್ರಾಫಿಟ್ ಸಂಸ್ಥೆ ಎಂದು ಮಾನ್ಯತೆ ಸಿಕ್ಕಿದೆ.
ಇನ್ನು ಈ ಅಕಾಡೆಮಿ ಮೂಲಕ 2020ರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಿದ್ದಾರೆ. ಒಟ್ಟು 20 ಕ್ಯಾಟಗರಿಯಲ್ಲಿ ಪ್ರಶಸ್ತಿ ನೀಡಲಿದ್ದು, ಪ್ರತಿ ಕ್ಯಾಟಗರಿಗೆ 5 ನಾಮಿನೇಷನ್ ಇರಲಿದೆ. ಪತ್ರಕರ್ತರೇ ವಿಜೇತರನ್ನು ಆಯ್ಕೆ ಮಾಡಲಿದ್ದು, ಪತ್ರಕರ್ತರಿಂದ ಯಾರು ಹೆಚ್ಚು ವೋಟ್ ಪಡೆದಿರುತ್ತಾರೋ, ಅದರ ಮೇಲೆ ಪ್ರಶಸ್ತಿ ಯಾರಿಗೆ ಹೋಗಬೇಕು ಅನ್ನೋದು ನಿರ್ಧಾರವಾಗಲಿದೆ.
ಈ ಹಿಂದೆ 1987ರಿಂದ ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್ ಪ್ರತಿ ವರ್ಷ ಒಂದು ಪ್ರಶಸ್ತಿಯನ್ನು ನೀಡುತ್ತಾ ಬಂದಿತ್ತು. ಈಗ ಅಸ್ತಿತ್ವಕ್ಕೆ ಬರುವ ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ 20 ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಮಾಡಲಿದೆ. 2020ರ ಜನವರಿ ತಿಂಗಳಿನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.
Pingback: DevSecOps
Pingback: Tag Heuer fake