ಹೋಮ್ ಮಿನಿಸ್ಟರ್ ಟಿಕೆಟ್ ಪಡೆಯಲು ಅವಕಾಶ!

ಸೂಪರ್ ಸ್ಟಾರ್ ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಸಿಗಬೇಕೇ ಇಲ್ಲಿದೆ ಅವಕಾಶ!

ಉಪೇಂದ್ರ ಅವರು ಹೇಳಿದ ರೀತಿಯಲ್ಲಿ ತುಂಬ ಚೆನ್ನಾಗಿ ರೀಲ್ಸ್​ ಮಾಡುವ ಮೂವರಿಗೆ ಸಿನಿಮಾದ ಟಿಕೆಟ್ ಸಿಗಲಿದೆ. ಇದರ ಜೊತೆಗೆ ಉಪ್ಪಿ ಜೊತೆ ಊಟ ಮಾಡುವ ಅವಕಾಶ ಕೂಡ ಸಿಗಲಿದೆ.

‘ಹೋಮ್​ ಮಿನಿಸ್ಟರ್’ ಏ.1ರಂದು ಬಿಡುಗಡೆ ಆಗಲಿದೆ. ಇದೇ ವೇಳೆ ತಮ್ಮ ಅಭಿಮಾನಿಗಳಿಗಾಗಿ ಉಪೇಂದ್ರ ಒಂದು ಟಾಸ್ಕ್​ ನೀಡಿದ್ದಾರೆ. ಅದನ್ನು ಚೆನ್ನಾಗಿ ಮಾಡಿದವರಿಗೆ ‘ಹೋಮ್​ ಮಿನಿಸ್ಟರ್​’ ಸಿನಿಮಾ ವೀಕ್ಷಿಸಲು ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಉಚಿತವಾಗಿ ಸಿಗಲಿದೆ. ಜೊತೆಗೆ ಉಪೇಂದ್ರ ಜೊತೆ ಕುಳಿತು ಊಟ ಮಾಡಬಹುದು!

ಈ ಬಗ್ಗೆ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಈ ಎರಡು ಚಾನ್ಸ್​ ಪಡೆಯಲು ಅಭಿಮಾನಿಗಳು ಉಪ್ಪಿ ಹಾಕಿರುವ ಸವಾಲನ್ನು ಸ್ವೀಕರಿಸಬೇಕು. ಉಪೇಂದ್ರ ಹೇಳಿದ ಕೆಲಸವನ್ನು ತುಂಬ ಚೆನ್ನಾಗಿ ಮಾಡುವ ಮೂವರಿಗೆ ಬಹುಮಾನ ಸಿಗಲಿದೆ. ಈ ಕುರಿತು ಉಪ್ಪಿ ಹಂಚಿಕೊಂಡಿರುವ ವಿಡಿಯೋ ವೈರಲ್​ ಆಗುತ್ತಿದೆ.
‘ಹೋಮ್​ ಮಿನಿಸ್ಟರ್​’ ಚಿತ್ರದಲ್ಲಿ ಉಪೇಂದ್ರ ಮತ್ತು ವೇದಿಕಾ ಅವರು ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾದ ಥೀಮ್​ಗೆ ತಕ್ಕಂತೆ ಉಪ್ಪಿ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಮನೆಯಲ್ಲಿ ತಮ್ಮ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಅನೇಕ ಕೆಲಸಗಳನ್ನು ಉಪ್ಪಿ ಮಾಡಿಕೊಟ್ಟಿದ್ದಾರೆ. ಮನೆ ಕ್ಲೀನ್​ ಮಾಡುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಹೆಂಡತಿಯ ಸೇವೆ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಉಪೇಂದ್ರ ನಿಭಾಯಿಸಿದ್ದಾರೆ.

ಅದೇ ರೀತಿ ಅಭಿಮಾನಿಗಳು ಕೂಡ ತಮ್ಮ ತಮ್ಮ ಮನೆಗಳಲ್ಲಿ ಈ ಕೆಲಸವನ್ನು ಮಾಡಬೇಕು. ಅದರ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಉಪೇಂದ್ರ ಅವರಿಗೆ ಟ್ಯಾಗ್​ ಮಾಡುವ ಮೂಲಕ ಹಂಚಿಕೊಳ್ಳಬೇಕು. ಹೀಗೆ ತುಂಬ ಚೆನ್ನಾಗಿ ರೀಲ್ಸ್​ ಮಾಡುವ ಮೂವರಿಗೆ ‘ಹೋಮ್ ಮಿನಿಸ್ಟರ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಮತ್ತು ಉಪ್ಪಿ ಜೊತೆ ಊಟ ಮಾಡುವ ಅವಕಾಶ ಸಿಗಲಿದೆ.

ಉಪೇಂದ್ರ ಹಾಕಿರುವ ಸವಾಲನ್ನು ಅನೇಕ ಅಭಿಮಾನಿಗಳು ಸ್ವೀಕರಿಸಿದ್ದಾರೆ. ಇವುಗಳಲ್ಲಿ ಕೆಲವು ರೀಲ್ಸ್​ಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಉಪೇಂದ್ರ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಉಪೇಂದ್ರ ಅವರು ಹುಡುಗಿ ರೀತಿ ಡ್ರೆಸ್​ ಮಾಡಿಕೊಂಡಿದ್ದ ಫೋಟೋ ವೈರಲ್​ ಆಗಿತ್ತು. ಈ ಚಿತ್ರಕ್ಕೆ ಸುಜಯ್​ ಕೆ. ಶ್ರೀಹರಿ ನಿರ್ದೇಶನ ಮಾಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!