ಚಾಮಯ್ಯ ಸನ್ ಆಫ್ ರಾಮಾಚಾರಿ

‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಟ್ರೈಲರ್ ಬಿಡುಗಡೆ

ಪಲ್ಲಕ್ಕಿ ನಿರ್ದೇಶನದ ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಎಸ್ ಆರ್ ವಿ ಚಿತ್ರಮಂದಿರದಲ್ಲಿ ಎರಡು ನಿಮಿಷದ ಟ್ರೈಲರ್ ಅನಾವರಣಗೊಳಿಸಲಾಯಿತು. ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ಅವರು ಈ ಚಿತ್ರದ ಬರವಣಿಗೆಯ ಜೊತೆಗೆ ಮಹತ್ವದ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ರಾಧಾಕೃಷ್ಣ ಪಲ್ಲಕ್ಕಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ ಮತ್ತು ಪಿ ಗೋವಿಂದರಾಜು ಸಹ ನಿರ್ಮಾಪಕರಾಗಿದ್ದಾರೆ.

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕರು, ಚಿತ್ರವನ್ನು ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್ 18ರಂದು ತೆರೆಗೆ ತರಲು ಯೋಚನೆ ಮಾಡಲಾಗಿತ್ತು. ಆದರೆ ಈಗಾಗಲೇ ಹತ್ತಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬರಲಿವೆ. ಈ ಕಾರಣದಿಂದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಪ್ರತ್ಯೇಕ ಪ್ರದರ್ಶನ ಮಾಡಲು ಚಿಂತನೆ ನಡೆಸಲಾಗಿದೆ. ಮೈಸೂರು, ಚಿತ್ರದುರ್ಗ ಹಾಗೂ ಶಿವಮೊಗ್ಗದಲ್ಲಿ ಹೆಚ್ಚು ಅಭಿಮಾನಿಗಳು ಇರುವುದರಿಂದ ಚಿತ್ರದ ಒಂದು ದಿನದ ಗಳಿಕೆಯ ಹಣವನ್ನು ಅಭಿಮಾನಿ ಸಂಘಗಳ ಸಮಾಜಮುಖಿ ಕಾರ್ಯಗಳಿಗೆ ನೀಡಲಾಗುವುದು ಎಂದರು.

ಚಾಮಯ್ಯ ಸನ್ ಆಫ್ ರಾಮಾಚಾರಿ

ಚಿತ್ರವನ್ನು ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆಯ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಜಲೀಲ್ ಮಗ ಛೋಟಾ ಜಲೀಲ್ ಆಗಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದರು.

ರಾಮಾಚಾರಿ ಪಾತ್ರ ನಿರ್ವಹಿಸಿರುವ ಜಯಶ್ರೀ ರಾಜ್ ಅವರು, ಚಿತ್ರೀಕರಣದ ಅನುಭವವನ್ನು ಹಚ್ಚಿಕೊಂಡರು.

ಚಿತ್ರದಲ್ಲಿ ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರಿ, ಪತ್ನಿಯಾಗಿ ಪ್ರೇಮ ಗೌಡ, ಮಗಳಾಗಿ ಚೈತ್ರ, ಪ್ರಿನ್ಸಿಪಾಲ್ ಆಗಿ ಪ್ರಕಾಶ್ ಅರಸು ನಟಿಸಿದ್ದಾರೆ. ಉಳಿದಂತೆ ಸೀನು ಮಾರ್ಕಳ್ಳಿ, ವರಪ್ರಸಾದ ಶರ್ಮ, ವಿನುತಾ, ರಾಘವೇಂದ್ರ, ಸುಧಾಕರ, ಸೂರ್ಯ ತೇಜ, ಗುರುಕಿರಣ್, ಸಂದೀಪ್ ಹಾಗೂ ವೃತ್ತಿಪರ ರಂಗಕರ್ಮಿಗಳು ನಟಿಸಿದ್ದಾರೆ.

ಚಾಮಯ್ಯ ಸನ್ ಆಫ್ ರಾಮಾಚಾರಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!