‘ಆಕ್ಟ್ 1978’ ಚಿತ್ರತಂಡಕ್ಕೆ ಸಾರಥಿ ಕೊಟ್ರು ಸಾತ್

ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಸಖತ್ ಗಮನ‌ ಸೆಳೆಯುತ್ತಿರೋ ಸಿನಿಮಾ ಆಕ್ಟ್ 1978. ನಾತಿಚರಾಮಿ ಸಿನಿಮಾ ಡೈರೆಕ್ಟ್‌ ಮಾಡಿದ್ದ ಮಂಸೋರೆ, ಆಕ್ಟ್ 1978ದ ಮೂಲಕ ಮತ್ತೆ ಭರವಸೆಯ ನಿರ್ದೇಶಕರೆನಿಸಿಕೊಂಡಿದ್ದಾರೆ. ಚಿತ್ರ ರಾಜ್ಯಾದ್ಯಂತ ತೆರೆಕಂಡು ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಸಿನಿಮಾಗೆ ಸಾಥ್ ನೀಡಿದ್ದಾರೆ. ಮೂರು ದಿನಗಳ ಕಾಲ ಸ್ನೇಹಿತರ ಜೊತೆ ಬೈಕ್ ರೈಡಿಂಗ್ ಮುಗಿಸಿ ಬಂದಿರುವ, ದರ್ಶನ್ ಕೊರೊನಾ ಟೈಮಲ್ಲಿ ಆಕ್ಟ್ 1978 ಸಿನಿಮಾ ರಿಲೀಸ್ ಆಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಬಲ ತುಂಬಲು ಕೈ ಜೋಡಿಸಿದ್ದಾರೆ.

ಸಿನಿಮಾ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ಮಾಧ್ಯಮ ಮಿತ್ರರ ವಿಮರ್ಶೆಗಳನ್ನು ಕೇಳಿ ಸಂತೋಷಗೊಂಡ ದರ್ಶನ್ ಅವರು, ಆಕ್ಟ್-1978 ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದ್ದಾರೆ‌.

ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸುರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ್‌ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಹೀಗೆ ದೊಡ್ಡ ತಾರ ಬಳಗವೇ ಈ ಚಿತ್ರದಲ್ಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!