ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್‍ಗೆ ವಿದೇಶದಲ್ಲಿ ಸನ್ಮಾನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ವರ್ಷ ಲಂಡನ್ ಪಾರ್ಲಿಮೆಂಟ್‍ನಿಂದ ‘ಗ್ಲೋಬಲ್ ಡೈವರ್ಸಿಟಿ’ ಪ್ರಶಸ್ತಿ ಪಡೆದಿರೋದು ನಿಮಗೆಲ್ಲ ಗೊತ್ತೆ ಇದೆ. ಇದೀಗ ಅವರು ವಿದೇಶದಲ್ಲಿ ಅವರನ್ನು ಗೌರವಿಸಲಾಗಿದೆ.

ಹೌದು, 63ನೇ ಕನ್ನಡ ರಾಜ್ಯೋತ್ಸವದಂದು ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಅವರನ್ನು ವಿದೇಶದಲ್ಲಿ ಗೌರವಿಸಲಾಗಿದೆ. ಇತ್ತೀಚೆಗೆ ಕತಾರ್ ದೇಶದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅಲ್ಲಿನ ಕನ್ನಡ ಸಂಘವೊಂದು ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸೃಜನ್ ಲೋಕೇಶ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಸೃಜನ್‍ರನ್ನು ಗೌರವಿಸಲಾಗಿದೆ.

ದರ್ಶನ್ ಹಾಗೂ ಸೃಜನ್ ಅವರನ್ನು ಸನ್ಮಾನ ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಸನ್ಮಾನ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಅಲ್ಲದೆ ತಮ್ಮ ನೆಚ್ಚಿನ ನಟ ದರ್ಶನ್ ಹಾಗೂ ಸೃಜನ್ ಲೋಕೆಶ್‍ರನ್ನು ನೋಡಿ ವಿದೇಶದಲ್ಲಿರುವ ಕನ್ನಡಿಗರು ಸಂತೋಷಪಟ್ಟಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!