ಪೈರಸಿ ಮಾಡುವವರ ವಿರುದ್ಧ ನಮ್ಮ ಹೋರಾಟ ಅನ್ನೋದು ಸುದೀಪ್ ಅವರ ಮಾತಿನ ಅರ್ಥ ಎಂದು ಸುದೀಪ್ ಬೆನ್ನಿಗೆ ನಿಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.
ಮಾರ್ಕ್ ಸಿನಿಮಾ ಇವೆಂಟ್ ವೇಳೆ ಕಿಚ್ಚ ಸುದೀಪ್ ಆಡಿದ ಮಾತುಗಳು ಹಲವು ಚರ್ಚೆಗೆ ಆಸ್ಪದ ನೀಡಿದೆ. ಇದು ನಟ ದರ್ಶನ್ ಅಭಿಮಾನಿಗಳ ಫ್ಯಾನ್ಸ್ ವಾರ್ ಗೆ ಕಾರಣವಾಗಿದೆ. ಈ ಸಂಬಂಧ ಫೇಸ್‌ಬುಕ್ ಲೈವ್‌ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಮಾತನಾಡಿದ್ದಾರೆ.
‘ಪೈರಸಿ ಸಮಸ್ಯೆ ಎಲ್ಲ ಸಿನಿಮಾದವರಿಗೂ ಎದುರಾಗುತ್ತದೆ. ನಾವಷ್ಟೇ ಅಲ್ಲ, 45, ಡೆವಿಲ್ ಎಲ್ಲಾ ಚಿತ್ರಗಳಿಗೂ ಈ ಸಮಸ್ಯೆ ಎದುರಾಗುತ್ತಿದೆ. ಡೆವಿಲ್ ಅವರು 9,000ಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ಪೈರಸಿ ವಿರುದ್ಧ ಕಿಚ್ಚ ಸುದೀಪ್ ಯುದ್ಧ ಸಾರುವುದಕ್ಕೆ ನಿಂತಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ?’ ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಶ್ನಿಸಿದ್ದಾರೆ.
‘ಸಿನಿಮಾಗಳನ್ನ ಹಾಳು ಮಾಡುವವರ ಒಂದು ಪಡೆ ಇದೆ. ಯಾವುದೋ ಒಂದು ಸಿನಿಮಾ ಯಶಸ್ವಿಯಾಗಬಾರದು ಅಂತ ಭಯೋತ್ಪಾದಕರಂತೆ ವರ್ತಿಸುತ್ತಾರೆ. ಸಿನಿಮಾ ರಿಲೀಸ್ ಆದ ಬಳಿಕ ಫಸ್ಟ್ ಶೋ ಮುಗಿದ ಕೂಡಲೇ ಪೈರಸಿ ಸಿನಿಮಾ ಲೀಕ್ ಆಗುತ್ತವೆ. ಮ್ಯಾಕ್ಸ್ ಸಿನಿಮಾ ರಿಲೀಸ್ ಆದಾಗ ನಾವೇ ಖುದ್ದು 11,000ಕ್ಕೂ ಅಧಿಕ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.
—–





Be the first to comment