‘ಉತ್ತರಕಾಂಡ’ಕ್ಕೆ ಚೈತ್ರಾ ಆಚಾರ್ ಎಂಟ್ರೀ

‘ಉತ್ತರಕಾಂಡ’ ಸಿನಿಮಾಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಚೈತ್ರಾ ಜೆ ಆಚಾರ್‌ ಎಂಟ್ರೀ ಆಗಿದೆ.

ಉತ್ತರಕಾಂಡ ಸಿನಿಮಾದ ಶೂಟಿಂಗ್‌ ವಿಜಯಪುರದಲ್ಲಿ ನಡೆಯುತ್ತಿದೆ. ಚೈತ್ರಾ ಉತ್ತರಕಾಂಡ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಲಚ್ಚಿ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆಗೆ ಚೈತ್ರಾ ಆಚಾರ್ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷವಾಗಿದೆ. ಲಚ್ಚಿ ಪಾತ್ರದ  ಲುಕ್ ನ್ನು ಚಿತ್ರತಂಡ ರಿವೀಲ್‌ ಮಾಡಿದೆ. ಉತ್ತರಕಾಂಡ ಚಿತ್ರದಲ್ಲಿ ಚೈತ್ರಾ ಆಚಾರ್‌ ಪಾತ್ರ ಸಂಪೂರ್ಣ ವಿಭಿನ್ನವಾಗಿದ್ದು, ಲಚ್ಚಿ ಪಾತ್ರದ  ಲುಕ್  ಉತ್ತರಕರ್ನಾಟಕದ ಹೆಣ್ಣುಮಗಳ ಫೀಲ್ ಆಗುತ್ತದೆ.

ಉತ್ತರಕಾಂಡ ಸಿನಿಮಾ ಉತ್ತರ ಕರ್ನಾಟಕದ ಕಥೆ ಮತ್ತು ಭಾಷೆಯನ್ನೆ ಆಧರಿಸಿದೆ. ಚೈತ್ರಾ ಉತ್ತರ ಕರ್ನಾಟಕ ಭಾಷೆ ಹೇಗೆ ಮಾತನಾಡ್ತಾರೆ? ಯಾವ ರೀತಿ ತಮ್ಮ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅನ್ನೋ ವಿಚಾರ ಕುತೂಹಲ ಕೆರಳಿಸಿದೆ.

ಚಿತ್ರತಂಡ ಆರಂಭದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರನ್ನು ಹೆಸರಿಸಿತ್ತು. ರಮ್ಯಾ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿದ್ದರು. ಆದರೆ ಇತ್ತೀಚೆಗೆ ಅವರು ಚಿತ್ರತಂಡದಿಂದ ಹೊರಬಂದು ಶಾಕ್‌ ನೀಡಿದ್ದರು. ”ಡೇಟ್ಸ್​ ಕೊರತೆಯಿಂದಾಗಿ ನಾನು ʼಉತ್ತರಕಾಂಡʼದಲ್ಲಿ ಕೆಲಸ ಮಾಡುತ್ತಿಲ್ಲ ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ. ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ʼ ಎಂದು ರಮ್ಯಾ ತಿಳಿಸಿದ್ದರು.

ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ. ರಾಜ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!