ದಂಡುಪಾಳ್ಯ ಚಿತ್ರದ ಹೆಸರು ಬಂದಾಗಿನಿಂದ ಬಿಡುಗಡೆ ಸಮಯದಲ್ಲಿ ಅವಘಡಗಳು ಬರುತ್ತಲೆ ಇದೆ. ಅದನ್ನೆಲ್ಲಾ ಎದುರಿಸಿ ಮೂರು ಭಾಗದ ಸಿನಿಮಾವು ಬಿಡುಗಡೆಯಾಗಿತ್ತು. ಎರಡು ಭಾಗಗಳನ್ನು ನಿರ್ಮಾಣ ಮಾಡಿದ್ದ ವೆಂಕಟ್ ಈಗ ‘ದಂಡುಪಾಳ್ಯಂ-4’ ಶೀರ್ಷಿಕೆಯೊಂದಿಗೆ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಟಾಲಿವುಡ್ದಲ್ಲಿ ಇದೇ ಹೆಸರಿನ ಚಿತ್ರಕ್ಕೆ ಕ್ರೇಜ್ ಇರುವ ಕಾರಣ ತೆಲುಗು ಭಾಷೆಯ ಟೈಟಲ್ನ್ನು ಕನ್ನಡದಲ್ಲಿ ಬಳಸಿಕೊಳ್ಳಲಾಗಿದೆ, ಸೆನ್ಸಾರ್ ಪ್ರಮಾಣಪತ್ರ ನೀಡಬೇಕಾದವರು, ಚಿತ್ರವನ್ನು ತಿರಸ್ಕರಿಸಿ ಬೇಕಿದ್ದರೆ ರಿವೈಸಿಂಗ್ ಕಮಿಟಿಗೆ ಹೋಗುವಂತೆ ಮೈಲ್ ಮುಖೇನ ಪತ್ರವನ್ನು ಬರೆದಿದ್ದಾರೆ. ನಿರ್ಮಾಪಕರು ಹೇಳುವಂತೆ ನಿಯಮಾನುಸಾರ ಚಿತ್ರವನ್ನು ಅಧಿಕಾರಿಗಳಿಗೆ ನವೆಂಬರ್ದಲ್ಲಿ ತೋರಿಸಲು ಸಿದ್ದರಾಗಿದ್ದವು. ಆದರೆ ಏಕಾಏಕಿ ವೀಕ್ಷಣೆ ಮಾಡುವುದಿಲ್ಲವೆಂದು ಖಾರವಾಗಿ ಮೌಕಿಕವಾಗಿ ಹೇಳಿರುತ್ತಾರೆ. ಮುಂದೆ ಗಣ್ಯ ವ್ಯಕ್ತಿ ಮಧ್ಯೆ ಪ್ರವೇಶಿಸಿದ್ದರಿಂದ ಜನವರಿ ನಾಲ್ಕರಂದು ವೀಕ್ಷಿಸಿ ಸಾರ್ವಜನಿಕರು ನೋಡಲು ಅರ್ಹತೆ ಇರುವುದಿಲ್ಲ ಚರ್ಚೆ ಮಾಡದೆ ರಿಜೆಕ್ಟ್ ಮಾಡಿದ್ದಾರೆ.
ಫೆಬ್ರವರಿ ಎರಡನೆ ವಾರದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿತ್ತು. ಬೇರೆ ಭಾಷೆಯಲ್ಲಿ ಸೆನ್ಸಾರ್ ಸದ್ಯದಲ್ಲೆ ನಡೆಯಲಿದೆ. ಅವರು ಇಂತಹ ದೃಶ್ಯ ಕಟ್ ಮಾಡಿ, ಇಲ್ಲವೆ ಮ್ಯೂಟ್ ಮಾಡಿ ಎಂದು ಹೇಳಿದ್ದರೆ, ಅವರ ಆದೇಶದಂತೆ ನಡೆದುಕೊಳ್ಳುತ್ತಿದ್ದವು. ಅದನ್ನು ಹೇಳದೆ ನಮ್ಮಂತ ಬಡ ನಿರ್ಮಾಪಕರಿಗೆ ಕಿಂಚಿತ್ತು ಕರುಣೆ ತೋರಿಸದೆ ತಮ್ಮದೆ ಧೋರಣೆಯಿಂದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿದ್ದಾರೆ. ಇದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕೇಂದ್ರ ಸೆನ್ಸಾರ್ ಮಂಡಳಿಗೆ ದೂರನ್ನು ನೀಡಲಾಗಿದೆ. ವಿಷಯದ ಕುರಿತು ಟ್ರಿಬುನ್ಯಲ್ಗೆ ಹೋಗುವುದಾ, ಕಾನೂನಿನ ಮೂಲಕ ಹೋರಾಟ ಮಾಡುವುದಾ ಎಂಬುದರ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ. ಅಲ್ಲಿಂದ ಉತ್ತರ ಬರುವುದು ಎಷ್ಟು ದಿನ ಆಗುತ್ತದೆಂದು ತಿಳಿದಿಲ್ಲ. ಈ ರೀತಿ ತಡವಾಗುತ್ತಿರುವುದರಿಂದ ನಮಗೆ ಹೆಚ್ಚು ಚಿಂತನೆ ಕಾಡುತ್ತಿದೆ ಎಂದು ಮಾಧ್ಯಮದ ಮುಂದೆ ಅಳಲನ್ನು ನಿರ್ಮಾಪಕರು ತೋಡಿಕೊಂಡರು.
Pingback: regression testing