ಕನ್ನಡದಲ್ಲಿ ಮಂಚ ಏರುವುದು ಕಾಮನ್ : ಗೀತಾ ಕೃಷ್ಣ

ತೆಲುಗು ಚಿತ್ರರಂಗದ ನಿರ್ದೇಶಕ ಗೀತಾ ಕೃಷ್ಣ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಗೀತಾ ಕೃಷ್ಣ 20 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇತ್ತು ಎಂದು ವಿವರಿಸಿದ್ದಾರೆ.

“ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ತುಂಬಾ ಅಸಹ್ಯ. ಕನ್ನಡದವರು ಇನ್ನೂ ಅಸಹ್ಯ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಿಂದ. ಖ್ಯಾತ ನಟಿಯಿಂದ ನನಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಅವಕಾಶ ಬೇಕು ಎಂದು ಕನ್ನಡದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಈ ಕಾರಣಕ್ಕೆ ನಾನು 20 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಸಹವಾಸ ಬಿಟ್ಟೆ’ ಎಂದು ಅವರು ಹೇಳಿದ್ದಾರೆ.

“ಸಿನಿಮಾದ ಆಫರ್ ಬೇಕೆಂದು ನಟಿಯರು ಮಂಚ ಏರುವುದು ಹೆಚ್ಚಾಗುತ್ತಿದೆ. ಸಂಗೀತ ನಿರ್ದೇಶಕರು ಕೂಡ ಗಾಯಕಿಯರ ಜೊತೆ ಮಲಗುತ್ತಿದ್ದಾರೆ. ಸಾಫ್ಟ್‌ವೇರ್ ಲೋಕದಲ್ಲಿಯೂ ಹೀಗೆ ನಡೆಯುತ್ತಿದೆ. ಕನ್ನಡವರಂತೂ ಇನ್ನೂ ಅಸಹ್ಯ ಕೊಳಕು ಜನರು. ಶೇ.90 ಗಂಡಸರು ಸುಂದರವಾದ ಹೆಣ್ಣು ನೋಡಿದರೆ ಸಾಕು ಆಕೆ ಜೊತೆ ಮಲಗಬೇಕು ಎಂದು ನಿರ್ಧಾರ ಮಾಡುತ್ತಾರೆ. ಅವರೆಲ್ಲಾ ಸಾಮಾನ್ಯ ಜನರಲ್ಲ. ಇದೆಲ್ಲಾ ಟ್ರ್ಯಾಪ್. ಇದೆಲ್ಲಾ ಆದ ಮೇಲೆ ಹಣ ಕೊಡುವಂತೆ ತೊಂದರೆ ಕೊಡುತ್ತಾರೆ. ಅನೇಕ ಹುಡುಗಿಯರು ಈ ಟ್ರ್ಯಾಪ್‌ಗೆ ಬೀಳುವುದಕ್ಕೆ ಇಷ್ಟ ಪಡುವುದಿಲ್ಲ” ಎಂದಿದ್ದಾರೆ.

‘ಆರ್‌ಆರ್‌ಆರ್‌ ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾ ತಲುಪಿದ ರೀತಿ ಬೇರೆ ಸಿನಿಮಾ ತಲುಪಬೇಕು ಎಂದರೆ ಸಿನಿಮಾ ಕಂಟೆಂಟ್‌ ಚೆನ್ನಾಗಿರಬೇಕು. ಸರ್ಕಾರು ವಾರಿ ಪಾಟು ಸಿನಿಮಾದಲ್ಲಿ ಮಹೇಶ್ ಬಾಬು ಹ್ಯಾಂಡ್‌ಸಮ್‌ ಆಗಿದ್ದರೂ ಕಂಟೆಂಟ್‌ ಚೆನ್ನಾಗಿಲ್ಲ. ಅದಕ್ಕೆ ಸಿನಿಮಾ ಓಡಿಲ್ಲ. ಆಚಾರ್ಯ ಸಿನಿಮಾದ ಕಂಟೆಂಟ್‌ ಚೆನ್ನಾಗಿಲ್ಲ. ಸಿನಿಮಾ ಮಾಡುವಾಗ ವಯಸ್ಸಿಗೆ ತಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮೆಗಾಸ್ಟಾರ್ ಚಿರಂಜೀವಿ ಅವರು ವಯಸ್ಸಿಗೆ ತಕ್ಕ ಪಾತ್ರ ಆಯ್ಕೆ ಮಾಡಿಕೊಳ್ಳುವುದಿಲ್ಲ. ವೆಂಕಟೇಶ್ ಅವರು ಸೂಕ್ತವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಿನಿ ವೀಕ್ಷಕರನ್ನು ರಂಜಿಸುತ್ತಾರೆ’ ಎಂದು ಗೀತಾ ಕೃಷ್ಣ ಹೇಳಿದ್ದಾರೆ.
___

 

Be the first to comment

Leave a Reply

Your email address will not be published. Required fields are marked *

Translate »
error: Content is protected !!