‘ಕಾಮಿಡಿ ಕಿಲಾಡಿ’ ಖ್ಯಾತಿಯ ನಯನ ವಿರುದ್ಧ ಅಟ್ರಾಸಿಟಿ ತಡೆ ಕಾಯ್ದೆಯಡಿ ದಲಿತ ಸಂಘಟನೆ ದೂರು ದಾಖಲಿಸಿದೆ.
ಕಲಬುರ್ಗಿಯ ದಲಿತ ಸೇನೆಯ ಅಧ್ಯಕ್ಷ ಮಂಜುನಾಥ ಅವರ ದೂರಿನ ಆಧಾರದ ಮೇಲೆ ನಯನಾ ವಿರುದ್ಧ ಅಟ್ರಾಸಿಟಿ ತಡೆ ಕಾಯ್ದೆಯಡಿ ದೂರು ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಯನಾ ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಚಿಟ್ ಫಂಡ್ ಹಗರಣ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುವಾಗ ಬಳಸಿದ ಪದಗಳು ದಲಿತ ವಿರೋಧಿ ಮತ್ತು ಜಾತಿ ನಿಂದನಾತ್ಮಕವಾಗಿವೆ. ನಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಸೇನೆ ಅಧ್ಯಕ್ಷ ಮಂಜುನಾಥ ಒತ್ತಾಯಿಸಿದ್ದಾರೆ.
ನವೆಂಬರ್ 29ರಂದು ಮೈಸೂರಿನ ಸರಸ್ವತಿಪುರದಲ್ಲಿ ಮೈಸೂರು ಮೆಟ್ರೋ ಮಿನಿಮಿಥಿ ಚಿಟ್ಫಂಡ್ ಹಗರಣ ಕುರಿತು ಮಾತನಾಡುತ್ತಿದ್ದ ವೇಳೆ ನಯನಾ ಜಾತಿ ಸೂಚಕ ಪದ ಮತ್ತು ಅವಮಾನಕಾರಿ ಪದಗಳನ್ನು ಬಳಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ದೂರು ಆಧಾರದ ಮೇಲೆ ಅಟ್ರಾಸಿಟಿ ತಡೆ ಕಾಯ್ದೆಯಡಿ ತನಿಖೆ ಪ್ರಾರಂಭವಾಗಿದೆ. ಈ ಹಿಂದೆ ನಟ ಉಪೇಂದ್ರ ತಮ್ಮ ವಿಡಿಯೋದಲ್ಲಿ ಇದೇ ರೀತಿಯ ಜಾತಿ ಸೂಚಕ ಪದ ಬಳಕೆ ಮಾಡಿ ಅವರ ವಿರುದ್ಧ ದೂರು ದಾಖಲಾಗಿತ್ತು.
—–





Be the first to comment