‘ಯುದ್ಧಕಾಂಡ’ ಚಿತ್ರಕ್ಕಾಗಿ ಅಜಯ್ ರಾವ್ ತಮ್ಮ ಮಗಳ ಅಚ್ಚುಮೆಚ್ಚಿನ ಕೋಟಿ ಬೆಲೆಯ BMW ಕಾರು ಮಾರಾಟ ಮಾಡಿದ್ದಾರೆ.
ಕಾರು ಮಾರಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಜಯ್ ರಾವ್ ಮಗಳು ಚೆರ್ರಿ ಕಾರು ಮಾರಾಟದ ವಿಷ ತಿಳಿದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ತನ್ನ ಅಚ್ಚುಮೆಚ್ಚಿನ ಕಾರು ತೆಗೆದುಕೊಂಡು ಹೋಗುತ್ತಿರುವುದಕ್ಕೆ ಕಣ್ಣೀರು ಹಾಕಿದ್ದಾಳೆ.
ಯುದ್ಧಕಾಂಡಕ್ಕಾಗಿ ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ , ಮನ, ಧನ ಅರ್ಪಿಸಿ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಹೆಣ್ಣಿನ ಶೋಷಣೆ ವಿರುದ್ಧ ಸಮರ ಸಾರಿದ್ದಾರೆ. ಈಗಾಗಲೇ ‘ಯುದ್ಧಕಾಂಡ’ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಭಾರೀ ಸದ್ದು ಮಾಡಿವೆ.
ʻಯುದ್ಧಕಾಂಡʼ ಏಪ್ರಿಲ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಪವನ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಅಜಯ್ ರಾವ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಜಯ್ ರಾವ್ ನಿರ್ಮಾಪಕರಾಗಿ ಹಣ ಹೂಡಿದ್ದಾರೆ.
ಅಜಯ್ ರಾವ್ ತಮ್ಮದೇ ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಸಿದ್ದಾರೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.
—–

Be the first to comment