ಬೆಂಗಳೂರಿನ ಭೂಗತ ಜಗತ್ತಿನ ‘ಕ್ಯಾಪಿಟಲ್ ಸಿಟಿ’ ಚಿತ್ರವನ್ನು ಮುಂದಿನ ವರ್ಷ ಜನವರಿ ಅಂತ್ಯದ ವೇಳೆಗೆ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.
‘ಕ್ಯಾಪಿಟಲ್ ಸಿಟಿ’ ಬೆಂಗಳೂರಿನ ಸಮಗ್ರ ಭೂಗತ ಜಗತ್ತಿನ ಬಗ್ಗೆ ಹೇಳುತ್ತದೆ. ತೊಂದರೆಗೊಳಗಾದ ನಾಯಕ ಮತ್ತು ಆತ ಎದುರಿಸುವ ವಿವಿಧ ಸವಾಲುಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಇದೊಂದು ಆ್ಯಕ್ಷನ್-ಪ್ಯಾಕ್ಡ್ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಉತ್ತಮವಾದ ಸಿನಿಮೀಯ ಅನುಭವವನ್ನು ನೀಡುತ್ತದೆ.
ಅಪ್ಪು ಪಪ್ಪು, ಮಸ್ತ್ ಮಜಾ ಮಾಡಿ, ನಂದಾ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಆರ್ ಅನಂತರಾಜು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜೀವ್ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರೇರಣಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ ಮತ್ತು ಕೆಎಸ್ ಶ್ರೀಧರ್ ಅವರಂತಹ ಹಿರಿಯ ನಟರಿದ್ದಾರೆ.
ನಾಯಕ ರಾಜೀವ್ ರೆಡ್ಡಿ ‘ಇದು ಸೇಡಿನ ಕಥೆಯಾಗಿದ್ದು, ನೀವು ತೊಂದರೆಗೊಳಗಾದಾಗ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುತ್ತೀರಿ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.
ಇನ್ಫಿನಿಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರ ತಂಡ ನಿರ್ಮಿಸಿರುವ ಈ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಆಗಿದೆ.
—-
Be the first to comment