ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹರಿಹಾಯ್ದಿದ್ದಾರೆ.
”ಪೌರತ್ವ ತಿದ್ದುಪಡಿ ಕಾಯ್ದೆ, ಧರ್ಮ ವಿಂಗಡನೆ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತ ಸರಿ ಇಲ್ಲ ಅಂತ ಬೇರೆ ಪಕ್ಷಕ್ಕೆ ಅಧಿಕಾರ ಸಿಕ್ಕಿತು. ಹತ್ತು ವರ್ಷಗಳಲ್ಲಿ ಅವರು ಹಿಂದು ಮುಸ್ಲಿಂ ಮತಾಂಧತೆ ಬಿಟ್ಟರೆ ಏನು ಮಾಡುತ್ತಿದ್ದಾರೆ?” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
”ನಾವು ಟ್ಯಾಕ್ಸ್ ಕಟ್ಟುತ್ತಿರುವುದು ದೇಶದ ಅಭಿವೃದ್ಧಿಗಾಗಿ, ಧರ್ಮಗಳನ್ನು ವಿಂಗಡಿಸಿ ಅಂತ ಅಲ್ಲ. ಈ ರೀತಿ ಆಡಳಿತ ನಡೆಸುವವರನ್ನು ಜನರೆ ಅಧಿಕಾರದಿಂದ ಕೆಳಗೆ ಇಳಿಸುತ್ತಾರೆ” ಎಂದು ಕಿಡಿಕಾರಿದ್ದಾರೆ.
”ದೇಶದಲ್ಲಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ, ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಬೆಲೆಏರಿಕೆ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ರೈತರ ಸಮಸ್ಯೆ ಬಗೆಹರಿಸದೆ ಬರೀ ಮಂದಿರ ಮಂದಿರ ಎಂದರೆ ಏನ್ ಪ್ರಯೋಜನ?” ಎಂದು ಪ್ರಶ್ನಿಸಿದ್ದಾರೆ.
“CAA ಅನ್ನೋದು ಬಹಳ ದೊಡ್ಡ ತಪ್ಪು. ಧರ್ಮದ ಆಧಾರದಲ್ಲಿ ಹೇಗೆ ಪೌರತ್ವ ಕೊಡುತ್ತೀರಿ? ಮಾನವೀಯತೆ ಮೌಲ್ಯದಲ್ಲಿ ಪೌರತ್ವ ಕೊಡಬೇಕು. ನಾಗರೀಕತೆ ಒಂದು ಜಾತಿ. ಒಂದು ಧರ್ಮದವರಿಗೆ ಸಿಟಿಜನ್ ಶಿಪ್ ಇಲ್ಲ ಅನ್ನೋದು ದೊಡ್ಡ ತಪ್ಪು. ಎಲೆಕ್ಷನ್ ಇದೆ ಅನ್ನೋವಾಗ ಯಾಕೇ ಸಿಎಎ ಜಾರಿಗೆ ತಂದಿರಿ?” ಎಂದು ಪ್ರಶ್ನೆ ಮಾಡಿದ್ದಾರೆ.
Be the first to comment