‘ಬೈ ಟೂ ಲವ್’ ನಲ್ಲಿ ಧನ್ವೀರ್ – ಶ್ರೀಲೀಲಾ

ಕೊರೋನ ಕಾರ್ಮೋಡ ಸರಿದು, ಎಲ್ಲೆಡೆ ಉತ್ಸಾಹ ಮರುಕಳಿಸುತ್ತಿದೆ. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಹೊರತಲ್ಲ. ಒಂದರ ಹಿಂದೆ ಒಂದು ನೂತನ ಸಿನಿಮಾಗಳು ಆರಂಭವಾಗುತ್ತಿದೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಬೈ ಟೂ ಲವ್’ .

ಕ್ರಿಸ್ಮಸ್ ಹಬ್ಬದ ದಿನ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡಿಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು.ಮೊದಲ ಸನ್ನಿವೇಶಕ್ಕೆ ಕಾಶ್ವಿ ವೆಂಕಟ್ ಆರಂಭ ಫಲಕ ತೋರಿದರು. ಸಿದ್ದು ವೆಂಕಟ್ ಕ್ಯಾಮೆರಾ ಚಾಲನೆ ಮಾಡಿದರು.

ಹರಿ ಸಂತೋಷ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಬಜಾರ್ ಖ್ಯಾತಿಯ ಧನ್ವೀರ್ ನಟಿಸುತ್ತಿದ್ದಾರೆ. ಬೆಡಗಿ ಶ್ರೀಲೀಲಾ ಈ ಚಿತ್ರದ ನಾಯಕಿ. ಸಾಧುಕೋಕಿಲ, ಅಚ್ಯುತಕುಮಾರ್, ಶಿವರಾಜ್ ಕೆ ಆರ್ ಪೇಟೆ ಮುಂತಾದವರ ತಾರಾಬಳಗ ಬೈ ಟೂ ಲವ್ ನಲ್ಲಿದೆ. ಇದು ಹರಿ ಸಂತೋಷ್ ನಿರ್ದೇಶನದ 9 ನೇ ಚಿತ್ರ.ಕೆ.ವಿ.ಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬೈ ಟೂ ಲವ್ ಈ ಸಂಸ್ಥೆ ನಿರ್ಮಾಣದ ಮೂರನೇ ಚಿತ್ರ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಜನವರಿ 4 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ಹೆಚ್ ಎಂ ಟಿ ಬಳಿ ಅದ್ದೂರಿ ಸೆಟ್ ನಿರ್ಮಾಣವಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!